alex Certify ಸಾರ್ವಜನಿಕ ಶೌಚಾಲಯಕ್ಕೆ ಹೋಗೋ ಮುನ್ನ ಹುಷಾರ್: ಈ ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತೀರಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕ ಶೌಚಾಲಯಕ್ಕೆ ಹೋಗೋ ಮುನ್ನ ಹುಷಾರ್: ಈ ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತೀರಾ..!

ಎಲ್ಲಾದರೂ ಹೋದಾಗ ಪ್ರಕೃತಿ ಕರೆ ಬಂದ್ರೆ ಸಾರ್ವಜನಿಕ ಶೌಚಾಲಯದ ಕಡೆ ಓಡುವ ಮುನ್ನ ಹುಷಾರಾಗಿರಿ. ಇಲ್ಲಿ ಶೌಚಾಲಯದ ಗಬ್ಬು ನಾರುವ ಬಗ್ಗೆ ಹೇಳುತ್ತಿಲ್ಲ…. ಸದ್ಯ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ನೋಡಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ..!

ಮೇಲ್ಸೇತುವೆ ಅಡಿಯಲ್ಲಿ ಸಿಲುಕಿದ ವಿಮಾನ..! ಸ್ಪಷ್ಟನೆ ನೀಡಿದ ಏರ್‌ ಇಂಡಿಯಾ

ಹೌದು, ಹೆದ್ದಾರಿಯ ಬದಿಯಲ್ಲಿದ್ದ ತೆರೆದ ಮೈದಾನದ ಬಳಿಯ ಸಾರ್ವಜನಿಕ ಶೌಚಾಲಯದಲ್ಲಿ ಸಿಂಹವೊಂದು ಕಾಣಿಸಿಕೊಂಡಿದೆ. ಅದು ಹೇಗೆ ಒಳಗೆ ಹೋಗಿತ್ತೋ ಗೊತ್ತಿಲ್ಲ.. ಹೊರಗೆ ಬಂದು ನಿಂತಿರುವ ದೃಶ್ಯವು ಕ್ಯಾಮರಾದಲ್ಲಿ ಸೆರೆಯಾಗಿದೆ.

ಮಹಿಳೆಯೊಬ್ಬಳು ‘ಯಾರು ಸ್ನಾನಗೃಹದಲ್ಲಿದ್ದಾರೆ ನೋಡಿ’ ಎಂದು ಅವಳು ಹೇಳಿದ ಕ್ಷಣ, ಸಿಂಹ ನಿಧಾನವಾಗಿ ಬಾಗಿಲಿನಿಂದ ಹೊರಬಂದಿತು ಮತ್ತು ಇನ್ನೊಂದು ತುದಿಯಲ್ಲಿರುವ ಜನರನ್ನು ದಿಟ್ಟಿಸಿತು. ನಂತರ ನಿಧಾನವಾಗಿ ಅಲ್ಲಿಂದ ಪೊದೆಗಳೊಳಗೆ ತೆರಳಿದೆ.

ಪ್ರಿಯಾಂಕಾ ಗಾಂಧಿ ಬಂಧನದ ವೇಳೆ ಹೈಡ್ರಾಮಾ…! ಪೊಲೀಸರ ವಿರುದ್ದ ಹರಿಹಾಯ್ದ ಕಾಂಗ್ರೆಸ್‌ ಯುವನಾಯಕಿ

ಅಕ್ಟೋಬರ್ 2 ರಂದು ವೈಲ್ಡ್‌ಲೆನ್ಸ್ ಇಕೋ ಫೌಂಡೇಶನ್ ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ. “ಶೌಚಾಲಯ ಯಾವಾಗಲೂ ಸುರಕ್ಷಿತವಲ್ಲ, ಕೆಲವೊಮ್ಮೆ ಇದನ್ನು ಇತರರೂ ಬಳಸಬಹುದು” ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋವನ್ನು 13,800 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ನೂರಾರು ಮಂದಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...