ಆಗ್ರಾ: ಯಮುನಾ ನದಿಯನ್ನು ಸ್ವಚ್ಛವಾಗಿಡುವ ಸಲುವಾಗಿ ಓಟಗಾರ ಹಾಗೂ ಸೈಕ್ಲಿಸ್ಟ್ ಪ್ರಮೋದ್ ಕುಮಾರ್ ಕಟಾರ 22 ಕಿ.ಮೀ ಓಡುವ ಮುಖಾಂತರ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.
ಆಗ್ರಾ ಸೋಮವಾರ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಿದೆ. ಇದಕ್ಕೂ ಮುನ್ನ ತಾಜ್ ನಗರದ ಕ್ರೀಡಾ ಸೆಲೆಬ್ರಿಟಿ ಪ್ರಮೋದ್ ಕುಮಾರ್ ಕಟಾರ, ಯಮುನಾ ನದಿಯ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಲು ಮುಂದಾಗಿದ್ದಾರೆ. ತಾಜ್ ಮಹಲ್ ಮತ್ತು ಇತರ ಸ್ಮಾರಕಗಳು ಸುರಕ್ಷಿತವಾಗಿಡಲು ಯಮುನಾ ನದಿಯ ಉದ್ದಕ್ಕೂ 22 ಕಿ.ಮೀ ಓಡಿದ್ದಾರೆ. ಇವರು ದೀರ್ಘ ಓಟ ಹಾಗೂ ಸೈಕ್ಲಿಂಗ್ ನಲ್ಲಿ ದಾಖಲೆ ಮಾಡಿದ್ದಾರೆ.
“ಜನರು ಜಲಮೂಲಗಳನ್ನು ಸುರಕ್ಷಿತವಾಗಿ ಮತ್ತು ಸ್ವಚ್ಛವಾಗಿಡಲು ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕು. ಕೈಗಾರಿಕೆಗಳು ಮಾತ್ರವಲ್ಲದೆ ಜಾನುವಾರು ಮಾಲೀಕರು ಮತ್ತು ಬಟ್ಟೆ ತೊಳೆಯುವವರು ಕೂಡ ಪವಿತ್ರ ನದಿಯನ್ನು ಕಲುಷಿತಗೊಳಿಸುವ ಕ್ರಿಮಿನಲ್ ಕೃತ್ಯವನ್ನು ತಕ್ಷಣವೇ ನಿಲ್ಲಿಸಬೇಕು” ಎಂದು ಪ್ರಮೋದ್ ಕುಮಾರ್ ಕಟಾರ ಹೇಳಿದ್ದಾರೆ.