alex Certify ಜಗಳವಾಡಿದ ಬಳಿಕ ರಾಜಿಯಾದ 2 ಕುಟುಂಬಗಳಿಗೆ ‘ಯಮುನಾ’ ನದಿ ಸ್ವಚ್ಛಗೊಳಿಸಲು ಕೋರ್ಟ್ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಗಳವಾಡಿದ ಬಳಿಕ ರಾಜಿಯಾದ 2 ಕುಟುಂಬಗಳಿಗೆ ‘ಯಮುನಾ’ ನದಿ ಸ್ವಚ್ಛಗೊಳಿಸಲು ಕೋರ್ಟ್ ಆದೇಶ

ಮಹಿಳೆಯೊಬ್ಬರ ಘನತೆಗೆ ಧಕ್ಕೆ ತಂದ ಸಂಬಂಧ ನವದೆಹಲಿಯ ಎರಡು ಕುಟುಂಬಗಳ ನಡುವೆ ಜಗಳ ನಡೆದಿದ್ದು, ಈ ಸಂಬಂಧ ಎರಡು ಎಫ್ಐಆರ್ ಗಳು ದಾಖಲಾಗಿದ್ದವು. ಇದೀಗ ಈ ಎರಡು ಕುಟುಂಬಗಳು ರಾಜಿ ಮಾಡಿಕೊಂಡಿದ್ದು, ಇದನ್ನು ಮನ್ನಿಸಿರುವ ನ್ಯಾಯಾಲಯ ಇವರುಗಳಿಗೆ ವಿಶೇಷ ಕೆಲಸವೊಂದನ್ನು ನೀಡಿದೆ.

ಹೌದು, ಈ ಕುಟುಂಬಸ್ಥರ ನಡುವಿನ ಜಗಳ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು, ಕಳೆದ ಫೆಬ್ರವರಿಯಲ್ಲಿ ಒಟ್ಟು ಆರು ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಆದರೆ ಏಪ್ರಿಲ್ನಲ್ಲಿ ರಾಜಿ ಮಾಡಿಕೊಂಡ ಈ ಎರಡು ಕುಟುಂಬಗಳ ಸದಸ್ಯರು ಇದನ್ನು ಹೈಕೋರ್ಟ್ ಗಮನಕ್ಕೆ ತಂದಿದ್ದರು.‌

ತಾವುಗಳು ರಾಜಿಯಾಗಿರುವ ಕಾರಣ ತಮ್ಮ ವಿರುದ್ಧದ ಕ್ರಿಮಿನಲ್ ಕೇಸ್ ರದ್ದುಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದು, ಇದಕ್ಕೆ ಒಪ್ಪಿಕೊಂಡಿರುವ ನ್ಯಾಯಾಲಯ ಕ್ರಿಮಿನಲ್ ಕೇಸ್ ರದ್ದುಗೊಳಿಸಿದೆ. ಆದರೆ ಎರಡು ಕುಟುಂಬಗಳ ಸದಸ್ಯರು ದೆಹಲಿ ಜಲ ಮಂಡಳಿ ತಂಡದ ಜೊತೆ ಸೇರಿ 45 ದಿನಗಳವರೆಗೆ ಯಮುನಾ ನದಿ ಸ್ವಚ್ಛಗೊಳಿಸುವ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಸೂಚಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...