ಮಹಿಳೆ ತನ್ನ ಕ್ರಿಸ್ಮಸ್ ಪಾರ್ಟಿಯಲ್ಲಿ ‘ಅನಾಹುತಕಾರಿ’ಯಾಗಿ ವೈರಲ್ ಆಗಿರುವ ಘಟನೆ ನಡೆದಿದೆ. ಕ್ರಿಸ್ಮಸ್ಗೆಂದು ಖರೀದಿ ಮಾಡಿದ ಬಟ್ಟೆಯ ಬಣ್ಣ ಬಿಟ್ಟುಕೊಂಡು ಮೈತುಂಬಾ ಹರಡಿ ಪಾರ್ಟಿಯಲ್ಲಿ ವಿಚಿತ್ರ ಸನ್ನಿವೇಶ ಎದುರಿಸಿದ್ದು, ಅದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾಳೆ.
ಲಂಡನ್ನ 25 ವರ್ಷದ ಬೆತ್ ಗ್ರೇ ಇಂಥದ್ದೊಂದು ವಿಚಿತ್ರ ಅನುಭವಿಸಿದಾಕೆ. ತಮ್ಮ ಚರ್ಮವನ್ನು ನೀಲಿ ಮಾಡಿದ ಡ್ರೀಮ್ ಡೇಜ್ ಕೋಬಾಲ್ಟ್ ಕಂಪೆನಿಗೆ ಧನ್ಯವಾದ ಹೇಳಿದ್ದಾಳೆ! ಇದಕ್ಕೆ ಕಾರಣ ಈ ರೀತಿ ವಿಚಿತ್ರವಾಗಿ ತನ್ನನ್ನು ಕಾಣುವಂತೆ ಮಾಡಿದುದಕ್ಕೆ ಇಷ್ಟೆಲ್ಲಾ ಪ್ರಸಿದ್ಧಿ ಪಡೆದೆ ಎಂದು!
ಆಗಿದ್ದೇನೆಂದರೆ ಬೆತ್ ಗ್ರೇ ನೀಲಿ ಬಣ್ಣದ ಡ್ರೆಸ್ ಖರೀದಿ ಮಾಡಿದ್ದರು. ನೀಲಿ ಗರಿಗಳ ಮೇಲ್ಭಾಗವನ್ನು ಅದು ಹೊಂದಿತ್ತು. ಆದರೆ ಆ ಬಟ್ಟೆಯ ಬಣ್ಣ ನಿಧಾನವಾಗಿ ಬಿಡುತ್ತಿದ್ದಂತೆಯೇ ಮೈಗೆಲ್ಲಾ ಹರಡಿದೆ. ಆರಂಭದಲ್ಲಿ ಅದು ಕಂಕುಳ ತುದಿ ಹರಡಿದೆ. ಇದನ್ನು ಬೆತ್ ಗ್ರೇ ಗಮನಿಸಿರಲಿಲ್ಲ. ಆಕೆಯ ಸ್ನೇಹಿತೆ ನಿನ್ನ ಕಂಕುಳನ್ನು ನೋಡು ಎಂದಾಗ ನಾಚಿಕೆಯಿಂದ ತಲೆ ತಗ್ಗಿಸುವಂತಾಯಿತು ಎಂದು ಬೆತ್ ಗ್ರೇ ಹೇಳಿಕೊಂಡಿದ್ದಾಳೆ.
ನಂತರ ತನ್ನ ಇಡೀ ಶರೀರ ನೀಲಿ ಬಣ್ಣದ್ದಾಗತೊಡಗಿತು. ಇದರಿಂದ ಜನರು ನನ್ನನ್ನು ವಿಚಿತ್ರವಾಗಿಯೂ, ಕುತೂಹಲವಾಗಿಯೂ ನೋಡುತ್ತಿದ್ದರು ಎಂದು ತನ್ನ ಫೋಟೋ ಮತ್ತು ವಿಡಿಯೋ ಹಂಚಿಕೊಂಡಿದ್ದಾಳೆ.
ಇಷ್ಟೆಲ್ಲಾ ಆದ ಮೇಲೆ ಆ ಡ್ರೆಸ್ ಅನ್ನು ವಾಪಸ್ ಕೊಡಲು ಬೆತ್ ಗ್ರೇ ನಿರ್ಧರಿಸಿದ್ದು, ಅಂಗಡಿ ಕೂಡ ಕ್ಷಮೆಯಾಚಿಸಿದೆ. ಆದರೆ ಇದರಿಂದಾಗಿ ಬೆತ್ ಗ್ರೇ ಸುದ್ದಿ ಮಾತ್ರ ಭಾರಿ ವೈರಲ್ ಆಗಿದೆ.