ಲಂಡನ್‌ನ ಡಾಮ್ ವೈಟಿಂಗ್ ಹೆಸರಿನ ಈತ ತನ್ನ ಸೈಕಲ್ ಮೇಲೇರಿಕೊಂಡು ಡಿಜೆ ಮೂಲಕ ಜನರನ್ನು ರಂಜಿಸುತ್ತಾ, ಬ್ರಿಟನ್‌ನಾದ್ಯಂತ ಸಂಚರಿಸುತ್ತಿದ್ದಾನೆ.
ಬ್ರಿಟನ್‌ನ ನಾನಾ ಊರುಗಳಿಗೆ ಬೈಸಿಕಲ್ ಏರಿಕೊಂಡು ಸಾಗಿರುವ ಡಾಮ್ ತಾನಿರುವಲ್ಲೇ ತನ್ನ ಕಾರ್ಯಕ್ರಮಗಳನ್ನು ಲೈವ್ ಸ್ಟ್ರೀಮ್ ಮಾಡಿಕೊಂಡು ಸಾಗುತ್ತಿದ್ದಾನೆ. ಈತನ ಈ ಪಾರ್ಟಿಗೆ ಸ್ಥಳೀಯರು ಸಾಥ್ ಕೊಡುತ್ತಿದ್ದು, ಆತನ ಸಂಗೀತಕ್ಕೆ ತಾಳ ಹಾಕುತ್ತಿದ್ದಾರೆ.
ಲಂಡನ್‌ನಿಂದ ಬ್ರಿಸ್ಟಾಲ್‌ವರೆಗೂ ತಾನು ಕೊಡುತ್ತಿರುವ ಕಾರ್ಯಕ್ರಮಗಳ ವಿಡಿಯೋಗಳನ್ನು ವೈಟಿಂಗ್ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿಕೊಂಡು ಬರುತ್ತಿದ್ದಾನೆ. ಆತನ ವಿಡಿಯೋಗಳ ಝಲಕ್ ಒಂದು ಇಲ್ಲಿದೆ ನೋಡಿ.