ಲಂಡನ್ನ ಪ್ರಸಿದ್ಧ ಹಿಥ್ರೋ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಕೊರೊನಾ ಕೇಸ್ಗಳ ಹೊಂದಿರುವ ರಾಷ್ಟ್ರಗಳಿಗಾಗಿ ಹೊಸ ಟರ್ಮಿನಲ್ ಒಂದನ್ನ ತೆರೆಯಲಾಗಿದೆ. ಬ್ರಿಟನ್ ಕೆಂಪು ಪಟ್ಟಿಯಲ್ಲಿ ಗುರುತಿಸಿದ್ದ ಭಾರತ ಸೇರಿದಂತೆ ಇತರೆ ಕೆಲ ರಾಷ್ಟ್ರಗಳಿಗೆ ಹೊಸ ಟರ್ಮಿನಲ್ ತೆರೆಯಲಾಗಿದೆ.
ಈ ಕೆಂಪು ಪಟ್ಟಿಯಲ್ಲಿ ನಮೂದಾಗಿರುವ ರಾಷ್ಟ್ರಗಳಿಂದ ಆಗಮಿಸುವ ಪ್ರಯಾಣಿಕರು ನೇರವಾಗಿ ಟರ್ಮಿನಲ್ 3ಗೆ ಬಂದಿಳಿಯಲಿದ್ದಾರೆ. ಬಳಿಕ ಇವರನ್ನ ಪ್ರಯಾಣಿಕರ ಸ್ವಂತ ಖರ್ಚಿನಲ್ಲಿ ಸರ್ಕಾರದಿಂದ ಅನುಮೋದಿತಗೊಂಡ ಕ್ವಾರಂಟೈನ್ ಕೊಠಡಿಗಳಲ್ಲಿ ಇರಿಸಲಾಗುತ್ತದೆ.
ಕೆಂಪು ಪಟ್ಟಿಯಲ್ಲಿ ಗುರುತಿಸಿಕೊಂಡ ದೇಶಗಳಿಂದ ಬರುವ ಪ್ರಯಾಣಿಕರು ಹಾಗೂ ಏರ್ಪೋರ್ಟ್ನಲ್ಲಿ ಉಂಟಾಗ್ತಿರುವ ಜನಸಂದಣಿಯ ಬಗ್ಗೆ ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಹೊಸ ಟರ್ಮಿನಲ್ನ್ನು ತೆರೆಯುವ ನಿರ್ಧಾರ ಕೈಗೊಳ್ಳಲಾಗಿದೆ.
ಬ್ರಿಟನ್ ಸರ್ಕಾರ ಪಟ್ಟಿ ಮಾಡಿರುವ ಈ ರೆಡ್ ಲಿಸ್ಟ್ನಲ್ಲಿ ಭಾರತ, ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾ ಸೇರಿದಂತೆ ಒಟ್ಟು 43 ದೇಶಗಳು ಇವೆ. ಈ ಎಲ್ಲಾ ದೇಶದ ಪ್ರಜೆಗಳು ಕಡ್ಡಾಯವಾಗಿ ಕ್ವಾರಂಟೈನ್ಗೆ ಒಳಗಾಗಲೇಬೇಕಿದೆ.