alex Certify BIG NEWS: ಚುನಾವಣಾ ಆಯೋಗದಿಂದ ಬರೋಬ್ಬರಿ 4,658 ಕೋಟಿ ಮೌಲ್ಯದ ವಸ್ತುಗಳು ಜಪ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಚುನಾವಣಾ ಆಯೋಗದಿಂದ ಬರೋಬ್ಬರಿ 4,658 ಕೋಟಿ ಮೌಲ್ಯದ ವಸ್ತುಗಳು ಜಪ್ತಿ

ನವದೆಹಲಿ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮಾತದಾರರನ್ನು ಓಲೈಸಲು ರಾಜಕೀಯ ಪಕ್ಷಗಳ ಮುಖಂಡರು ಕಸರತ್ತು ನಡೆಸಿದ್ದಾರೆ. ಚುನಾವಣೆ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಎಲೆಕ್ಷನ್ ಕಮಿಷನ್ ತೀವ್ರ ನಿಗಾ ವಹಿಸಿದೆ. ಈ ನಿಟ್ಟಿನಲ್ಲಿ ಮಾರ್ಚ್ ನಿಂದ ಏಪ್ರಿಲ್ 13ರವರೆಗೆ ಕೋಟ್ಯಂತರ ರೂಪಾಯಿ ಮೌಲ್ಯದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದಿದೆ.

ಮಾರ್ಚ್ 1 ರಿಂದ ಏಪ್ರಿಲ್ 13ರವರೆಗೆ ವಿವಿಧ ಏಜೆನ್ಸಿಗಳ ಸಹಾಯದಿಂದ 4,658 ಕೋಟಿ ಮೌಲ್ಯದ ಹಣ, ಹೆಂಡ, ಚಿನ್ನ, ಬೆಳ್ಳಿ, ಡ್ರಗ್ಸ್ ಇತ್ಯಾದಿಗಳನ್ನು ಜಪ್ತಿ ಮಡಲಾಗಿದೆ.

ಈ ವಸ್ತುಗಳಲ್ಲಿ ಮಾದಕ ವಸ್ತುಗಳ ಪ್ರಮಣವೇ ಹೆಚ್ಚಿದೆ. 395 ಕೋಟಿ ನಗದು ಹಣ, 489 ಕೋಟಿ ಮೌಲ್ಯದ ಹೆಂಡ, 2,069 ಕೋಟಿ ಮೌಲ್ಯದ ಡ್ರಗ್ಸ್, 562 ಕೋಟಿ ಮೌಲ್ಯದ ಅಮೂಲ್ಯ ಲೋಹಗಳು, 1143 ಕೋಟಿ ಮೌಲ್ಯದ ಉಡುಗೊರೆಗಳನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...