ರೈಲ್ವೆ ಚಾಲಕರ ಸಮಯ ಪ್ರಜ್ಞೆಯಿಂದ ಉಳಿಯಿತು ಗಜರಾಜನ ಜೀವ..! 26-08-2021 1:30PM IST / No Comments / Posted In: Latest News, India, Live News ರೈಲ್ವೆ ಹಳಿಯ ಮೇಲೆ ದಾಟುತ್ತಿರುವಾಗ ಪ್ರಾಣ ಕಳೆದುಕೊಂಡ ಅದೆಷ್ಟೋ ಆನೆಗಳ ಬಗ್ಗೆ ನೀವು ಕೇಳಿರ್ತೀರಾ. ಇದೊಂದು ದುಃಖಕರ ಸುದ್ದಿಯಾಗಿದ್ದರೂ ಸಹ ಇಂತಹ ಘಟನೆಗಳು ಪದೇ ಪದೇ ಮರುಳಿಸುತ್ತಲೇ ಇರುತ್ತದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಪ್ರಸ್ತುತ ವೈರಲ್ ಆಗಿರುವ ವಿಡಿಯೋದಲ್ಲಿ ರೈಲ್ವೆ ಹಳಿಯನ್ನು ದಾಟುತ್ತಿದ್ದ ಆನೆ ಪ್ರಾಣ ರಕ್ಷಿಸುವಲ್ಲಿ ರೈಲ್ವೆ ಚಾಲಕರು ಯಶಸ್ವಿಯಾಗಿದ್ದನ್ನು ಕಾಣಬಹುದಾಗಿದೆ. ಆನೆಯು ರೈಲ್ವೆ ಹಳಿಯನ್ನು ದಾಟುತ್ತಿರೋದನ್ನು ಗಮನಿಸಿದ ಚಾಲಕರು ಸರಿಯಾದ ಸಮಯಕ್ಕೆ ಬ್ರೇಕ್ ಹಾಕಿದ್ದಾರೆ. ರೈಲ್ವೆ ಹಳಿಯನ್ನು ದಾಟಿದ ಆನೆಯು ಆರಾಮಾಗಿ ಕಾಡಿನೊಳಕ್ಕೆ ಎಂಟ್ರಿ ಕೊಟ್ಟಿದ್ದನ್ನೂ ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಅಂದಹಾಗೆ ಈ ಘಟನೆಯು ಪಶ್ಚಿಮ ಬಂಗಾಳದ ನಾಗ್ರಕಟ – ಚಾಸ್ಲಾ ಮಧ್ಯದಲ್ಲಿ ಸಂಭವಿಸಿದೆ. ರೈಲ್ವೆ ಚಾಲಕರ ಸಮಯ ಪ್ರಜ್ಞೆಗೆ ನೆಟ್ಟಿಗರು ಶಹಬ್ಬಾಸ್ ಎಂದಿದ್ದಾರೆ. While working 03150Dn KanchanKanya Exp spl at 17.45 hrs today, Alert LP Sri D.Dorai & ALP Sri P. Kumar noticed One Tusker adjacent to track at KM 72/1 between Nagrakata-Chalsa & applied Emergency brake to control the train & save it. @RailNf@RailMinIndia @wti_org_india pic.twitter.com/TVyXt8HY9H — DRM ALIPURDUAR (@drm_apdj) August 25, 2021