alex Certify ನಾಳೆಯಿಂದ ನೈಟ್ ಕರ್ಫ್ಯೂ, ಜುಲೈ 5 ರಿಂದ ಸಂಡೇ ಸಂಪೂರ್ಣ ಲಾಕ್ ಡೌನ್: ಸರ್ಕಾರದಿಂದ ಪ್ರತ್ಯೇಕ ಮಾರ್ಗಸೂಚಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆಯಿಂದ ನೈಟ್ ಕರ್ಫ್ಯೂ, ಜುಲೈ 5 ರಿಂದ ಸಂಡೇ ಸಂಪೂರ್ಣ ಲಾಕ್ ಡೌನ್: ಸರ್ಕಾರದಿಂದ ಪ್ರತ್ಯೇಕ ಮಾರ್ಗಸೂಚಿ

ಬೆಂಗಳೂರು: ಕೊರೊನಾ ಸೋಂಕು ತಡೆಯಲು ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿರುವ ರಾಜ್ಯ ಸರ್ಕಾರ ನಾಳೆಯಿಂದ ರಾತ್ರಿ 8 ರಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಅದೇ ರೀತಿ ಜುಲೈ 5ರಿಂದ ಭಾನುವಾರ ಕಂಪ್ಲೀಟ್ ಲಾಖ್ ಡೌನ್ ಜಾರಿ ಮಾಡಲಾಗುವುದು.

ಜುಲೈ 10 ರಿಂದ ಎಲ್ಲಾ ಸರ್ಕಾರಿ ಮತ್ತು ಸರ್ಕಾರಿ ಸ್ವಾಮ್ಯದ ಕಚೇರಿಗಳು ವಾರದಲ್ಲಿ 5 ದಿನಗಳ ಕಾಲ ಕಾರ್ಯನಿರ್ವಹಿಸಲಿವೆ. ಶನಿವಾರ ರಜೆ ನೀಡಿ ವಾರದ ಕೆಲಸದ ದಿನಗಳನ್ನು 5 ದಿನಗಳಿಗೆ ಇಳಿಕೆ ಮಾಡಲಾಗುವುದು ಎಂದು ಹೇಳಲಾಗಿದೆ.

ಸದ್ಯ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿದ್ದು, ಒಂದು ಗಂಟೆ ಕಡಿತ ಮಾಡಲಾಗುವುದು. ಅಗತ್ಯ ಸೇವೆ, ಅಗತ್ಯ ವಸ್ತು ಹೊರತುಪಡಿಸಿ ಉಳಿದ ಚಟುವಟಿಕೆಗಳಿಗೆ ನಿರ್ಬಂಧ ಹೇರಲಿದ್ದು, ಸರ್ಕಾರದಿಂದ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...