ತಿಮಿಂಗಿಲವೊಂದಕ್ಕೆ ತುತ್ತಾಗಿದ್ದ ಲಾಬ್‌ಸ್ಟರ್ ಡೈವರ್ ಒಬ್ಬರು, ದೈತ್ಯಜೀವಿ ತನ್ನ ತುತ್ತನ್ನು ಉಗುಳಿದ ಬಳಿಕ ಬಚಾವಾಗಿ ಬಂದ ಘಟನೆ ಅಮೆರಿಕದ ಮಸ್ಸಾಚುಸೆಟ್ಸ್‌ನಲ್ಲಿ ಘಟಿಸಿದೆ.
ಮೈಕೇಲ್ ಪ್ಯಾಕಾರ್ಡ್ ಹೆಸರಿನ 56 ವರ್ಷ ವಯಸ್ಸಿನ ಈ ಡೈವರ್, ಪ್ರಾವಿನ್ಸ್‌ಟೌನ್‌ನಲ್ಲಿ 45 ಅಡಿ ನೀರಿನಾಳದಲ್ಲಿ ಈಜುತ್ತಿದ್ದ ವೇಳೆ ತಿಮಿಂಗಿಲವೊಂದು ದಾಳಿ ಮಾಡಿದೆ. ಮೊದಲಿಗೆ ತನ್ನ ಮೇಲೆ ಶಾರ್ಕ್ ಒಂದು ದಾಳಿ ಮಾಡಿದೆ ಎಂದುಕೊಂಡ ಮೈಕೇಲ್‌ಗೆ ತಾನು ತಿಮಿಂಗಿಲದ ಬಾಯಿಗೆ ತುತ್ತಾಗಿದ್ದೇನೆ ಎಂದು ಕೂಡಲೇ ಅರಿವಿಗೆ ಬಂತು.
ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆ ಭರ್ತಿ
“ಇದ್ದಕ್ಕಿದ್ದಂತೆ ನನಗೆ ಈ ದೊಡ್ಡ ಬಂಪ್ ಅನುಭವಕ್ಕೆ ಬಂದು, ಎಲ್ಲವೂ ಕತ್ತಲೆಯಾದಂತೆ ಕಾಣಿಸಿತು. ನಾನು ಚಲಿಸುತ್ತಿದ್ದೇನೆ ಎಂದು ನನ್ನ ಅರಿವಿಗೆ ಬಂದಾಗ, ’ಓಹ್ ಮೈ ಗಾಡ್, ನಾನು ಇದೀಗ ತಾನೇ ಶಾರ್ಕ್ ಕಡಿತಕ್ಕೆ ಒಳಗಾಗಿದ್ದೇನೆಯೇ?” ಎಂದುಕೊಂಡೆ.
“ಇದಾದ ಬಳಿಕ ಹಾಗೇ ತಿರುಗಿದ ನಾನು, ಅಲ್ಲಿ ಯಾವುದೇ ಹಲ್ಲು ಇಲ್ಲವೆಂದು ಅರಿತೆ ಹಾಗೂ ನನಗೆ ಯಾವ ದೊಡ್ಡ ನೋವೂ ಆಗುತ್ತಿರಲಿಲ್ಲ. ಇದಾದ ಮೇಲೆ ನನ್ನ ಅರಿವಿಗೆ ಬಂತು, ’ಓಹ್ ದೇವರೇ, ನಾನು ತಿಮಿಂಗಿಲದ ಬಾಯಿಯೊಳಗೆ ಇದ್ದೇನೆಂದೂ, ಅದು ನನ್ನನ್ನು ನುಂಗಲು ನೋಡುತ್ತಿದೆ ಎಂದು” ಎಂದು ತಮ್ಮ ಆ ಕ್ಷಣಗಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ ಪಕಾರ್ಡ್.
ನೀಳವಾದ ರೆಪ್ಪೆಗೂದಲಿನ ಕಾರಣಕ್ಕೆ ಮಹಿಳೆಯಿಂದ ವಿಶ್ವದಾಖಲೆ…!
“ಆಗ ನಾನು ಸಾಯಲಿದ್ದೇನೆ ಎಂದುಕೊಂಡಿದ್ದೆ. ನನ್ನ ಮಡದಿ ಹಾಗೂ ಮಕ್ಕಳ ಬಗ್ಗೆ ಚಿಂತಿಸಿದ ನಾನು ಅಲ್ಲಿಂದ ತಪ್ಪಿಸಿಕೊಳ್ಳಲು ಯಾವುದೇ ಮಾರ್ಗವಿಲ್ಲ ಎಂದುಕೊಂಡಿದ್ದೆ. ಆಗ ಇದ್ದಕ್ಕಿದ್ದಂತೆ, ತಿಮಿಂಗಿಲ ಮೇಲಕ್ಕೆ ಹೋಗಿ ತನ್ನ ತಲೆಯನ್ನು ಅಲ್ಲಾಡಿಸಲು ಆರಂಭಿಸಿತು. ಗಾಳಿಯಲ್ಲಿ ತೂರಲ್ಪಟ್ಟ ನಾನು ನೀರಿಗೆ ಬಿದ್ದೆ. ಬಂಧಮುಕ್ತನಾಗಿದ್ದ ನಾನು ಹಾಗೇ ನೀರಿನ ಮೇಲೆ ತೇಲುತ್ತಿದ್ದೆ. ನನಗೆ ನಂಬಲು ಆಗುತ್ತಿಲ್ಲ……ನಾನು ಇದನ್ನು ನಿಮ್ಮೊಂದಿಗೆ ಹೇಳಿಕೊಳ್ಳಲು ಇಲ್ಲಿದ್ದೇನೆ” ಎಂದು ಪಕಾರ್ಡ್ ಹೇಳಿಕೊಂಡಿದ್ದಾರೆ. ತಿಮಿಂಗಿಲದ ಬಾಯೊಳಗೆ ತಾವು 30 ಸೆಕೆಂಡ್‌ಗಳ ಮಟ್ಟಿಗೆ ಇದ್ದಿದ್ದಾಗಿ ಪಕಾರ್ಡ್ ಹೇಳಿಕೊಂಡಿದ್ದಾರೆ.