alex Certify RAIN EFFECT: ಬೆಂಗಳೂರಿನ ರಸ್ತೆ ಮೇಲೆ ಸಿಕ್ತು ಕ್ಯಾಟ್ ಫಿಶ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

RAIN EFFECT: ಬೆಂಗಳೂರಿನ ರಸ್ತೆ ಮೇಲೆ ಸಿಕ್ತು ಕ್ಯಾಟ್ ಫಿಶ್…!

ಮಳೆ ಆರ್ಭಟಕ್ಕೆ ಇಡೀ ಕರ್ನಾಟಕವೇ ಬೆಚ್ಚಿಬಿದ್ದಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆ ಕಾರಣಕ್ಕೆ ಜನ ಮನೆಯಿಂದ ಹೊರ ಬರಲೂ ಹಿಂದೆಮುಂದೆ ನೋಡುವಂತಾಗಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರು ವರುಣಾರ್ಭಟಕ್ಕೆ ತತ್ತರಿಸಿ ಹೋಗಿದ್ದು, ಜನ ಪರದಾಡುತ್ತಿದ್ದಾರೆ.

ಪ್ರಮುಖ ರಸ್ತೆಗಳು ನೀರಿನಿಂದ ಆವೃತವಾಗಿದ್ದು, ವಾಹನ ಸಂಚಾರ ಕಷ್ಟಕರವಾಗಿದೆ. ಕೆಲವೊಂದು ಬಡಾವಣೆಗಳಲ್ಲಿ ಬೋಟ್ ಮೇಲೆ ಸಂಚರಿಸುವಷ್ಟು ನೀರು ನಿಂತಿದೆ. ರಾಜ ಕಾಲುವೆಯ ಒತ್ತುವರಿಯೇ ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ.

ಇದರ ಮಧ್ಯೆ ಕೆಲವೊಂದು ನಂಬಲಸಾಧ್ಯ ಘಟನೆಗಳು ನಡೆಯುತ್ತಿದ್ದು, ಮಳೆ ನೀರು ಹರಿಯುತ್ತಿದ್ದ ಪ್ರಮುಖ ರಸ್ತೆಯಲ್ಲಿ ಕ್ಯಾಟ್ ಫಿಶ್ ಸಿಕ್ಕಿದೆ. ಇದರ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೆಳ್ಳಂದೂರು ಬಳಿ ಈ ಕ್ಯಾಟ್ ಫಿಶ್ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

— Sameer Mohan (@sleepyhead148) August 30, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...