alex Certify ಪುಟಾಣಿಗಳ ಮೊದಲ ಲೈಬ್ರರಿ ಭೇಟಿ: ಬಾಗಲಕೋಟೆಯ ವಿದ್ಯಾರ್ಥಿಗಳ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟಾಣಿಗಳ ಮೊದಲ ಲೈಬ್ರರಿ ಭೇಟಿ: ಬಾಗಲಕೋಟೆಯ ವಿದ್ಯಾರ್ಥಿಗಳ ವಿಡಿಯೋ ವೈರಲ್​

ನಮ್ಮಲ್ಲಿ ಹೆಚ್ಚಿನವರು ನಮ್ಮ ಶಾಲಾ ದಿನಗಳಲ್ಲಿ ಗ್ರಂಥಾಲಯಕ್ಕೆ ಹೋಗುವುದನ್ನು ಇಷ್ಟಪಟ್ಟಿದ್ದೇವೆ. ಶಾಲೆಯ ಪಠ್ಯಕ್ರಮದ ಹೊರತಾಗಿ ಏನನ್ನಾದರೂ ಓದುವುದು ಎಂದರೆ ಹಲವು ವಿದ್ಯಾರ್ಥಿಗಳಿಗೆ ಯಾವಾಗಲೂ ಆಸಕ್ತಿದಾಯಕವಾಗಿತ್ತು. ಆದರೆ ಈಗ ಗ್ರಂಥಾಲಯಕ್ಕೆ ಹೋಗುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಪುಟ್ಟ ಪುಟ್ಟ ಮಕ್ಕಳನ್ನು ಲೈಬ್ರರಿಗೆ ಕರೆದುಕೊಂಡು ಹೋಗಿರುವ ಸುಂದರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ಹೃದಯ ಗೆದ್ದಿದೆ.

ಉಮಾ ಮಹದೇವನ್ ದಾಸ್‌ಗುಪ್ತಾ ಅವರು ಟ್ವಿಟರ್‌ನಲ್ಲಿ ಮಕ್ಕಳ ವಿಡಿಯೋ ಹಂಚಿಕೊಂಡಿದ್ದಾರೆ. ಬಾಗಲಕೋಟೆಯಲ್ಲಿ ಕಂಡು ಬಂದಿರುವ ದೃಶ್ಯವಿದು. ಈ ವಿಡಿಯೋವನ್ನು ಮೂಲತಃ ಪಿಡಿಒ ಅಧಿಕಾರಿ ವಿಮಲಾ ಶೇರ್​ ಮಾಡಿಕೊಂಡಿದ್ದಾರೆ.

ಈ ಚಿಕ್ಕ ವಿಡಿಯೋದಲ್ಲಿ ತಮ್ಮ ಶಾಲಾ ಸಮವಸ್ತ್ರದಲ್ಲಿ ಚಿಕ್ಕ ಚಿಕ್ಕ ಪುಟಾಣಿಗಳು ಬಾಗಲಕೋಟೆಯಲ್ಲಿ ಮೊದಲ ಬಾರಿಗೆ ಗ್ರಂಥಾಲಯಕ್ಕೆ ಹೋಗುವುದನ್ನು ನೋಡಬಹುದು. “ಗ್ರಾಮೀಣ ಗ್ರಂಥಾಲಯಕ್ಕೆ ತಮ್ಮ ಮೊದಲ ಭೇಟಿಯಲ್ಲಿ ಪುಟ್ಟ ಅಂಗನವಾಡಿ ಮಕ್ಕಳು! ಎಂದು ಇದಕ್ಕೆ ಶೀರ್ಷಿಕೆ ನೀಡಿದ್ದಾರೆ ವಿಮಲಾ. ಇನ್ನೊಂದು ವಿಡಿಯೋದಲ್ಲಿ ಮುದ್ದಾದ ಪುಟ್ಟ ಮಕ್ಕಳು ಲೈಬ್ರರಿಯಲ್ಲಿ ಪುಸ್ತಕಗಳನ್ನು ಹಿಡಿದು ಓದುತ್ತಿರುವುದನ್ನು ತೋರಿಸಿದೆ. ಅವರಲ್ಲಿ ಹಲವರು “ಪುಸ್ತಕಗಳನ್ನು ಕೈಯಲ್ಲಿ ಹಿಡಿಯಲು ಕಲಿಯುತ್ತಿದ್ದಾರೆ. ಅವರಲ್ಲಿ ಹಲವರು ಮೊದಲ ತಲೆಮಾರಿನ ಕಲಿಯುವವರು” ಎಂಬ ಶೀರ್ಷಿಕೆ ನೀಡಲಾಗಿದೆ.

ಈ ವಿಡಿಯೋಗೆ  ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮಕ್ಕಳಿಗೆ ಎಳವೆಯಲ್ಲಿಯೇ ಪುಸ್ತಕ ಪ್ರೀತಿಯನ್ನು ಕಲಿಸಬೇಕಿದೆ ಎಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...