
ಐಪಿಎಸ್ ಅಧಿಕಾರಿ ಅಂಕಿತಾ ಶರ್ಮಾ ಅವರು ಟ್ವಿಟ್ಟರ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಜಿಮ್ ಅಖಾಡದಲ್ಲಿ ಪುಟ್ಟ ಬಾಲೆ ತನ್ನ ಲೆಗ್ ಕಿಕ್ ಮಾಡಿದ್ದಾಳೆ. ರಬ್ಬರ್ ಗೊಂಬೆ ತರಹ ಪಲ್ಟಿಗಳನ್ನು ಮಾಡಿದ್ದಾಳೆ. ವಿಡಿಯೋ ನೋಡುತ್ತಿದ್ರೆ ಇವಳೇನು ಗೊಂಬೆಯೋ ಅಥವಾ ಬಾಲಕಿಯೋ ಅಂತಾ ಸಂಶಯ ಮೂಡುತ್ತದೆ.
ಬಾಲಕಿಯ ಅದ್ಭುತ ಪ್ರತಿಭೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. 246k ಮಂದಿ ವಿಡಿಯೋ ವೀಕ್ಷಿಸಿದ್ದು, ಬಾಲಕಿಯ ಪ್ರತಿಭೆ ಕಂಡು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.
ಕಠಿಣ ತರಬೇತಿಯಿಂದ ಪುಟ್ಟ ಬಾಲೆ ಬಹಳ ದೊಡ್ಡಮಟ್ಟದ ಸಾಧನೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಅಬ್ಬಾ ಎಂತಹ ಪ್ರತಿಭಾವಂತ ಬಾಲಕಿ ಈಕೆ ಅಂತೆಲ್ಲಾ ಪ್ರಶಂಸಿದ್ದಾರೆ. ಇನ್ನೂ ಕೆಲವರು, ಇಂಥದ್ದನ್ನೆಲ್ಲಾ ಮಾಡಲು ಬಾಲಕಿ ತುಂಬಾ ಚಿಕ್ಕವಳಲ್ಲವೇ ಅಂತಾ ಪ್ರಶ್ನಿಸಿದ್ದಾರೆ.