alex Certify ಮಾನವೀಯ ಮೌಲ್ಯದಲ್ಲಿ ವಯಸ್ಕರಿಗೂ ಮಾದರಿಯಾಗಿ ನಿಂತಿದ್ದಾಳೆ ಈ ಬಾಲಕಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನವೀಯ ಮೌಲ್ಯದಲ್ಲಿ ವಯಸ್ಕರಿಗೂ ಮಾದರಿಯಾಗಿ ನಿಂತಿದ್ದಾಳೆ ಈ ಬಾಲಕಿ….!

ಅವಶ್ಯಕತೆ ಇರುವವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂಬ ಮಾತನ್ನು ಹಿರಿಯರು ಹೇಳೋದನ್ನು ನಾವು ಕೇಳ್ತಿರ್ತೇವೆ. ಆದರೆ ಈ ಮಾತಿಗೆ ಪ್ರತ್ಯಕ್ಷ ಸಾಕ್ಷಿಯೆಂಬಂತ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ಪಾರ್ಕ್​ನಲ್ಲಿ ಆಟವಾಡುತ್ತಿದ್ದ ವೇಳೆ ಪುಟ್ಟ ಬಾಲಕಿ ಮತ್ತೊಬ್ಬರಿಗೆ ಮಾಡುವ ಸಹಾಯದ ದೃಶ್ಯಾವಳಿಗಳು ಈ ವಿಡಿಯೋದಲ್ಲಿದೆ.

ಕ್ಯಾಮಿಲ್ಲೆ ಮಾಡೆಲಿನ್​ ಎಂಬ ಬಾಲಕಿಯ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಈ ವಿಡಿಯೋವನ್ನು ಶೇರ್​ ಮಾಡಲಾಗಿದೆ. ಪ್ರಸ್ತುತ ಈ ಇನ್​ಸ್ಟಾಗ್ರಾಂ ಖಾತೆಯನ್ನು ಆಕೆಯ ಪೋಷಕರು ನೋಡಿಕೊಳ್ತಿದ್ದಾರೆ. ಈ ವಿಡಿಯೋದಲ್ಲಿ ಪುಟ್ಟ ಬಾಲಕಿಯೊಬ್ಬಳು ಕ್ಯಾಮಿಲಿಗೆ ಆಟವಾಡುವ ವೇಳೆ ಸಹಾಯ ಮಾಡಿದ್ದಾಳೆ. ಇದಕ್ಕಾಗಿ ಕ್ಯಾಮಿಲಿ ತಾಯಿ ಬಾಲಕಿಯ ತಾಯಿಗೆ ಧನ್ಯವಾದವನ್ನು ಅರ್ಪಿಸಿದ್ರು.

ದಯಾ ಬುದ್ಧಿಯನ್ನು ಈ ವಿಡಿಯೋ ಕಲಿಸುತ್ತದೆ ಎಂದು ಶೀರ್ಷಿಕೆ ನೀಡಲಾಗಿದೆ. ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ.

https://www.instagram.com/reel/CS_5KJ5A2fz/?utm_source=ig_web_copy_link

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...