ತನ್ನ ಹೆತ್ತವರು ಕೆಲಸದ ನಿಮಿತ್ತ ಬ್ಯುಸಿಯಾಗಿದ್ದ ವೇಳೆ ತನ್ನಿಂತಾನೇ ವೈದ್ಯರಲ್ಲಿಗೆ ಹೋಗಿದ್ದಾಳೆ ನಾಗಾಲ್ಯಾಂಡ್ನ ಮೂರು ವರ್ಷದ ಈ ಪುಟ್ಟಿ.
ಈ ಪುಟ್ಟಿಯ ಹೆಸರು ಲಿಪಾವಿ ಎಂದು ತಿಳಿದುಬಂದಿದ್ದು, ವೈದ್ಯರೊಂದಿಗೆ ಆಕೆ ಮಾತನಾಡುತ್ತಿರುವ ಚಿತ್ರವೊಂದು ವೈರಲ್ ಆಗಿದೆ. ಇಲ್ಲಿನ ಹೆಬೋಲಿಮಿ ಆರೋಗ್ಯ ಹಾಗೂ ವೆಲ್ನೆಸ್ ಸೆಂಟರ್ನ ವೈದ್ಯಕೀಯ ಸಿಬ್ಬಂದಿ ಈ ಪುಟಾಣಿಯನ್ನು ಕಂಡು ಅಚ್ಚರಿಗೊಂಡಿದ್ದಾರೆ.
ಲಿಪಾವಿಗೆ ಶೀತದ ಲಕ್ಷಣಗಳಿದ್ದವು. ಆದರೆ ಆಕೆಯ ಹೆತ್ತವರು ಭತ್ತದ ಗದ್ದೆಗೆ ತೆರಳಿ ಕೆಲಸದಲ್ಲಿ ಮಗ್ನರಾಗಿದ್ದ ಕಾರಣ ಈ ಪುಟ್ಟಿ ತಾನೇ ವೈದ್ಯರಲ್ಲಿಗೆ ಹೋಗಿದ್ದಾಳೆ