alex Certify ʼಜುಗ್ನುʼ ಹಾಡಿಗೆ ಕುಣಿದು ಕುಪ್ಪಳಿಸಿದ ಪುಟ್ಟ ಬಾಲೆ: ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 2 ಮಿಲಿಯನ್ ಮಂದಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಜುಗ್ನುʼ ಹಾಡಿಗೆ ಕುಣಿದು ಕುಪ್ಪಳಿಸಿದ ಪುಟ್ಟ ಬಾಲೆ: ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 2 ಮಿಲಿಯನ್ ಮಂದಿ..!

Viral Video: Little Girl Rocks The Internet With Her Amazing Dance on  Badshahs Jugnu | Watchಪುಟ್ಟ ಮಕ್ಕಳ ಮುದ್ದಾದ ವಿಡಿಯೋಗಳು ಆಗಾಗ್ಗೆ ಇಂಟರ್ನೆಟ್‍ನಲ್ಲಿ ಕಾಣಿಸಿಕೊಳ್ಳುತ್ತವೆ. ಅಂತಹ ವಿಡಿಯೋಗಳು ನೆಟ್ಟಿಗರ ಹೃದಯ ಗೆಲ್ಲುವುದ್ರಲ್ಲಿ ಸಂಶಯವೇ ಇಲ್ಲ. ಇದೀಗ ಬಾದ್‌ಶಾ ಅವರ ಜುಗ್ನು ಹಾಡಿಗೆ ಪುಟ್ಟ ಹುಡುಗಿಯೊಬ್ಬಳು ಡ್ಯಾನ್ಸ್ ಮಾಡಿರುವ ವಿಡಿಯೋ ನೆಟ್ಟಿಗರ ಮನಗೆದ್ದಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಡಿಜೆ ಮಾಂಟಿ ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಪುಟ್ಟ ಬಾಲಕಿ ಉತ್ಸಾಹಭರಿತ ಜುಗ್ನು ಟ್ರ್ಯಾಕ್‌ಗೆ ಅದ್ಭುತವಾಗಿ ಕುಣಿದು ಕುಪ್ಪಳಿಸಿದ್ದಾಳೆ. ತನ್ನ ವಿಶಿಷ್ಟವಾದ ನೃತ್ಯದಿಂದ ಇಂಟರ್ನೆಟ್‍ನಲ್ಲಿ ಹೊಸ ಸೆನ್ಸೇಷನ್ ಸೃಷ್ಟಿಸಿದ್ದಾಳೆ.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋವನ್ನು 2 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಇಷ್ಟು ಪುಟ್ಟ ಬಾಲಕಿ ಈ ರೀತಿ ನೃತ್ಯ ಮಾಡುತ್ತಿರುವುದನ್ನು ಇದೇ ಮೊದಲ ಬಾರಿಗೆ ನೋಡುತ್ತಿರುವುದಾಗಿ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಬಾಲಕಿಯ ನೃತ್ಯ ಕಂಡು ಮೈ ನಡುಕ ಬಂದಿತು ಅಂತಾ ಮತ್ತೊಬ್ಬ ಬಳಕೆದಾರರು ಆಕೆಯ ಪ್ರತಿಭೆಯನ್ನು ಹಾಡಿ ಹೊಗಳಿದ್ದಾರೆ. ಕೆಲವರು ಆಕೆಯ ಆತ್ಮವಿಶ್ವಾಸವನ್ನು ಮೆಚ್ಚಿದ್ರೆ, ಇನ್ನು ಕೆಲವರು ಆಕೆಯ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.

ಜುಗ್ನು ಹಾಡನ್ನು ಬಾದ್‌ಶಾ ಮತ್ತು ನಿಕಿತಾ ಗಾಂಧಿ ಹಾಡಿದ್ದಾರೆ. ಪೆಪ್ಪಿ ಟ್ರ್ಯಾಕ್ ಅದರ ಚಮತ್ಕಾರಿ ಬೀಟ್ಸ್ ಮತ್ತು ಡಾನ್ಸ್ ಸ್ಟೆಪ್‌ಗಳಿಂದಾಗಿ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...