alex Certify ಗೊಂಬೆಗೆ ಅಂಟಿಸಲು ನೋಟಿನ ಮೇಲಿದ್ದ ರಾಣಿಯ ಮುಖ ಕತ್ತರಿಸಿದ ಬಾಲಕಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೊಂಬೆಗೆ ಅಂಟಿಸಲು ನೋಟಿನ ಮೇಲಿದ್ದ ರಾಣಿಯ ಮುಖ ಕತ್ತರಿಸಿದ ಬಾಲಕಿ….!

ಪುಟ್ಟ ಮಕ್ಕಳ ಮುಗ್ಧತೆ ಹೆತ್ತವರಿಗೆ ಭಾರೀ ಸಂಕಟ ತಂದೊಡ್ಡಿಬಿಡಬಲ್ಲವು. ಬ್ರಿಟನ್‌ನ ಮಹಿಳೆಯೊಬ್ಬರಿಗೆ ಇಂಥದ್ದೇ ನಿದರ್ಶನ ಎದುರಾಗಿದ್ದು, ಮುದ್ದಿನ ಮಗಳು ಆಟವಾಡುತ್ತಾ ದುಡ್ಡಿನ ಮೇಲಿದ್ದ ಎಲಿಜ಼ಬೆತ್‌ ರಾಣಿಯ ಮುಖವನ್ನೇ ಕತ್ತರಿಸಿಬಿಟ್ಟಿದ್ದಾಳೆ.

ತನ್ನ ಗೊಂಬೆಗಳಿಗೆ ಅಂಟಿಸಲು ರಾಣಿಯ ಮುಖವನ್ನು ಕತ್ತರಿಸಿ ತೆಗೆದುಬಿಟ್ಟಿದ್ದಾಳೆ ಈ ಬಾಲಕಿ. ಮಿಡಲ್ಸ್‌ಬರೋದ ವಿಕ್ಟೋರಿಯಾ ಇಂಗ್ಹಾಮ್ ಹೆಸರಿನ ಮಹಿಳೆಗೆ ತನ್ನ ಮಗಳು ಎಸ್ಮೇಳೆ ಈ ಆಟವನ್ನು ನೋಡಿ ಅಳಬೇಕೋ ನಗಬೇಕೋ ಗೊತ್ತಾಗದೇ, ಈ ಕಥೆಯನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 5 ಪೌಂಡ್ ಹಾಗೂ 20 ಪೌಂಡ್‌ನ ಈ ನೋಟುಗಳು ಹರಿದು ಬಿದ್ದಿದ್ದನ್ನು ನೋಡಿ ತಲೆ ಕೆಟ್ಟುಹೋಗಿದೆ ವಿಕ್ಟೋರಿಯಾಗೆ.

ವೃದ್ಧೆಗೆ ಉಡುಗೊರೆಯಾಗಿ ಬಂತು ಬಾರ್ಬಿ ಗೊಂಬೆ….!

ಹರಿದ ನೋಟುಗಳು ಆಕೆಯನ್ನು ಬೇಸರಕ್ಕೆ ತಳ್ಳಿದರೆ, 4-ವರ್ಷ ವಯಸ್ಸಿನ ತನ್ನ ಮಗಳು ರಾಣಿಯ ಮುಖವನ್ನು ಕಟ್ ಮಾಡಿ ಬಾರ್ಬಿ ಗೊಂಬೆಗಳಿಗೆ ಅಂಟಿಸಿದ್ದನ್ನು ಕಂಡು ಬಿದ್ದೂ ಬಿದ್ದೂ ನಕ್ಕಿದ್ದಾರೆ.

https://www.facebook.com/SpottedCoventryCity/photos/a.621433387916452/4441159562610463/?type=3

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...