ಪುಟ್ಟ ಮಕ್ಕಳ ಮುಗ್ಧತೆ ಹೆತ್ತವರಿಗೆ ಭಾರೀ ಸಂಕಟ ತಂದೊಡ್ಡಿಬಿಡಬಲ್ಲವು. ಬ್ರಿಟನ್ನ ಮಹಿಳೆಯೊಬ್ಬರಿಗೆ ಇಂಥದ್ದೇ ನಿದರ್ಶನ ಎದುರಾಗಿದ್ದು, ಮುದ್ದಿನ ಮಗಳು ಆಟವಾಡುತ್ತಾ ದುಡ್ಡಿನ ಮೇಲಿದ್ದ ಎಲಿಜ಼ಬೆತ್ ರಾಣಿಯ ಮುಖವನ್ನೇ ಕತ್ತರಿಸಿಬಿಟ್ಟಿದ್ದಾಳೆ.
ತನ್ನ ಗೊಂಬೆಗಳಿಗೆ ಅಂಟಿಸಲು ರಾಣಿಯ ಮುಖವನ್ನು ಕತ್ತರಿಸಿ ತೆಗೆದುಬಿಟ್ಟಿದ್ದಾಳೆ ಈ ಬಾಲಕಿ. ಮಿಡಲ್ಸ್ಬರೋದ ವಿಕ್ಟೋರಿಯಾ ಇಂಗ್ಹಾಮ್ ಹೆಸರಿನ ಮಹಿಳೆಗೆ ತನ್ನ ಮಗಳು ಎಸ್ಮೇಳೆ ಈ ಆಟವನ್ನು ನೋಡಿ ಅಳಬೇಕೋ ನಗಬೇಕೋ ಗೊತ್ತಾಗದೇ, ಈ ಕಥೆಯನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 5 ಪೌಂಡ್ ಹಾಗೂ 20 ಪೌಂಡ್ನ ಈ ನೋಟುಗಳು ಹರಿದು ಬಿದ್ದಿದ್ದನ್ನು ನೋಡಿ ತಲೆ ಕೆಟ್ಟುಹೋಗಿದೆ ವಿಕ್ಟೋರಿಯಾಗೆ.
ವೃದ್ಧೆಗೆ ಉಡುಗೊರೆಯಾಗಿ ಬಂತು ಬಾರ್ಬಿ ಗೊಂಬೆ….!
ಹರಿದ ನೋಟುಗಳು ಆಕೆಯನ್ನು ಬೇಸರಕ್ಕೆ ತಳ್ಳಿದರೆ, 4-ವರ್ಷ ವಯಸ್ಸಿನ ತನ್ನ ಮಗಳು ರಾಣಿಯ ಮುಖವನ್ನು ಕಟ್ ಮಾಡಿ ಬಾರ್ಬಿ ಗೊಂಬೆಗಳಿಗೆ ಅಂಟಿಸಿದ್ದನ್ನು ಕಂಡು ಬಿದ್ದೂ ಬಿದ್ದೂ ನಕ್ಕಿದ್ದಾರೆ.
https://www.facebook.com/SpottedCoventryCity/photos/a.621433387916452/4441159562610463/?type=3