alex Certify ಪುಟ್ಟ ಸಹೋದರರ ಬಾಂಧವ್ಯಕ್ಕೆ ನೆಟ್ಟಿಗರು ಫಿದಾ; ನಿಮಗೂ ಖುಷಿ ಕೊಡುತ್ತೆ ಈ ಸುಂದರ ವಿಡಿಯೋ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಸಹೋದರರ ಬಾಂಧವ್ಯಕ್ಕೆ ನೆಟ್ಟಿಗರು ಫಿದಾ; ನಿಮಗೂ ಖುಷಿ ಕೊಡುತ್ತೆ ಈ ಸುಂದರ ವಿಡಿಯೋ….!

ಇಂಟರ್ನೆಟ್‌ನಲ್ಲಿ ಹೃದಯಸ್ಪರ್ಶಿ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರೋ ವಿಡಿಯೋ ಖಂಡಿತಾ ನಿಮ್ಮ ಮನಗೆಲ್ಲುತ್ತೆ. ಪುಟ್ಟ ಬಾಲಕನೊಬ್ಬ ತನ್ನ ಅಣ್ಣನ ಮೇಲಿನ ಪ್ರೀತಿಯನ್ನು ತೋರಿಸುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

ಈ ಹೃದಯಸ್ಪರ್ಶಿ ವಿಡಿಯೋವನ್ನು ಐಎಎಸ್ ಅಧಿಕಾರಿ ಸುಮಿತಾ ಮಿಶ್ರಾ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಹಿರಿಯ ನಟ ಧರ್ಮೇಂದ್ರ ಅವರ ಗಮನ ಸೆಳೆದಿದೆ. ಈ ವಿಡಿಯೋ 7 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದ್ದು, ವೈರಲ್ ಆಗಿದೆ.

ವೈರಲ್ ಆಗಿರೋ ವಿಡಿಯೋದಲ್ಲಿ ಮುದ್ದಾದ ಪುಟ್ಟ ಬಾಲಕನೊಬ್ಬ ತನ್ನ ಅಣ್ಣನಿಗಾಗಿ ಬಸ್ ನಿಲ್ದಾಣದಲ್ಲಿ ಕಾತರದಿಂದ ಕಾಯುತ್ತಿದ್ದಾನೆ. ಶಾಲಾ ಬಸ್ ಹತ್ತಿರ ಬರುತ್ತಿರುವುದನ್ನು ಕಂಡ ಕೂಡಲೇ ಖುಷಿಯಿಂದ ಕುಣಿಯಲು ಆರಂಭಿಸುತ್ತಾನೆ. ಹಿರಿಯ ಸಹೋದರ ವಾಹನದಿಂದ ಇಳಿದ ಕೂಡಲೇ ತನ್ನ ಸಹೋದರನನ್ನು ಖುಷಿಯಿಂದ ತಬ್ಬಿಕೊಳ್ಳುತ್ತಾನೆ.

ಈ ವಿಡಿಯೋ ನೆಟ್ಟಿಗರ ಮನಗೆದ್ದಿದೆ. ಸಹೋದರರು ಹಂಚಿಕೊಂಡ ಬಾಂಧವ್ಯದ ಬಗ್ಗೆ ತಮ್ಮ ಪ್ರೀತಿಯನ್ನು ಸುರಿಸಿದ್ದಾರೆ. ಹಿರಿಯ ನಟ ಧರ್ಮೇಂದ್ರ ಕೂಡ ಹೃತ್ಪೂರ್ವಕ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಮರುಟ್ವೀಟ್ ಮಾಡಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...