alex Certify ಸಫಾರಿ ವಾಹನದೊಳಕ್ಕೆ ನುಗ್ಗಿದ ಸಿಂಹ ಮಾಡಿದ್ದೇನು ನೋಡಿ; ಕುತೂಹಲದ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಫಾರಿ ವಾಹನದೊಳಕ್ಕೆ ನುಗ್ಗಿದ ಸಿಂಹ ಮಾಡಿದ್ದೇನು ನೋಡಿ; ಕುತೂಹಲದ ವಿಡಿಯೋ ವೈರಲ್​

ನೀವು ತೆರೆದ ಬದಿಯ ವಾಹನದಲ್ಲಿ ಸಫಾರಿಗೆ ಹೋಗಿದ್ದರೆ, ಕಾರಿನ ಬಳಿ ಯಾವುದೇ ಪ್ರಾಣಿ ಬಂದಾಗ ಭಯ ಪಡುವುದು ಸಾಮಾನ್ಯ. ಆದರೆ ಹೀಗೆ ಹೋದಾಗ ಸಿಂಹನೋ, ಹುಲಿಯೋ ಗಾಡಿಯ ಬಳಿ ಬರುವುದು ದೂರದ ಮಾತು, ಸಫಾರಿಯ ವಾಹನದೊಳಕ್ಕೇ ಬಂದುಬಿಟ್ಟರೆ?

ಹೃದಯವೇ ಬಾಯಿಗೆ ಬಂದಂತಾಗುತ್ತದೆ ಅಲ್ಲವೆ? ಇಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. ಸಫಾರಿ ವಾಹನದೊಳಗೆ ಸಿಂಹಿಣಿಯೊಂದು ಜಿಗಿದಿರುವ ವಿಡಿಯೋ ಇದಾಗಿದ್ದು, ನೋಡುಗರನ್ನು ಬೆಚ್ಚಿಬೀಳಿಸುವಂತಿದೆ.

ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಪ್ರವಾಸಿಗರೊಬ್ಬರು ರೆಕಾರ್ಡಿಂಗ್ ಮಾಡುತ್ತಿರುವುದನ್ನು ಕಾಣಬಹುದು. ಸಫಾರಿ ವಾಹನವೊಂದು ಹೋಗುತ್ತಿರುವಾಗ ಸಿಂಹಿಣಿ ವಾಹನದೊಳಕ್ಕೆ ನುಗ್ಗಿದೆ. ಜನರು ಒಂದೇ ಸಲಕ್ಕೆ ಕಂಗಾಲಾಗಿದ್ದಾರೆ.

ಆದರೆ ಸಿಂಹಿಣಿಯು ಪ್ರವಾಸಿಗರ ಮೇಲೆ ಎರಗಿ ಅವರನ್ನು ಮುದ್ದಿಸುತ್ತಿದ್ದು, ಬೆಕ್ಕು ತನ್ನ ಮಾಲೀಕರನ್ನು ಮುದ್ದಿಸುವಂತೆ ಕಾಣುತ್ತಿದೆ. ಈ ಕ್ಯೂಟ್​ ವಿಡಿಯೋಗೆ ಭಯದಿಂದ ಇರುವ ನೆಟ್ಟಿಗರು ಕೂಲ್​ ಕೂಲ್​ ಆಗಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

https://twitter.com/OTerrifying/status/1589946543796150273?ref_src=twsrc%5Etfw%7Ctwcamp%5Etweetembed%7Ctwterm%5E1589946543796150273%7Ctwgr%5E41d75cb72276d1bc6eb324ee1db112453e9f604f%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Flioness-jumps-inside-safari-vehicle-in-viral-video-what-happens-next-will-confuse-you-2296179-2022-11-11

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...