ಸಿಂಹಗಳು ಜಿರಾಫೆಗಳನ್ನು ಬೇಟೆಯಾಡುತ್ತವೆ. ಆದರೆ ಅದು ಎಲ್ಲಾ ಸಮಯದಲ್ಲೂ ಅಲ್ಲ. ಸಿಂಹಗಳಿಗೇ ಅಪಾಯಕಾರಿ ಮತ್ತು ಕಠಿಣ ಬೇಟೆಯಾದ ವಿಡಿಯೋ ನೆಟ್ಟಿಗರ ಹುಬ್ಬೇರಿಸಿದೆ. ಸಾಮಾನ್ಯವಾಗಿ ಸಿಂಹಗಳು ಅಸಹಾಯಕ, ಅನಾರೋಗ್ಯ, ಗರ್ಭಿಣಿ ಮತ್ತು ದುರ್ಬಲ ಜಿರಾಫೆಗಳನ್ನು ಗುರಿಯಾಗಿಸುತ್ತವೆ.
ಸಿಂಹಗಳು ಸಾಮಾನ್ಯವಾಗಿ ಹಿಂದಿನಿಂದ ಜಿರಾಫೆಯ ಮೇಲೆ ದಾಳಿ ಮಾಡುತ್ತವೆ. ಅವುಗಳನ್ನು ನೆಲಕ್ಕೆ ಮುಗ್ಗರಿಸಿ, ಸಾಯುವಂತೆ ಮಾಡಿ ನಂತರ ಅವುಗಳನ್ನು ತಿನ್ನುತ್ತವೆ. ಸಿಂಹವು ಬೃಹತ್ ಗಾತ್ರ ಮತ್ತು ಎತ್ತರದ ಜಿರಾಫೆಯನ್ನು ಎಂದಿಗೂ ನೇರವಾಗಿ ಎದುರಿಸಲ್ಲ. ಎತ್ತರದ ಜಿರಾಫೆಯ ಗಂಟಲನ್ನು ಕಚ್ಚಿ ಸಾಯಿಸಲು ಸಿಂಹಕ್ಕೆ ಸಾಧ್ಯವಾಗುವುದಿಲ್ಲ.
ಆದರೆ ಜಿರಾಫೆಯೊಂದು ಸಿಂಹಿಣಿಯನ್ನು ಹೊಡೆದು ಓಡಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಒಂಟಿ ಸಿಂಹಿಣಿಯು ತನ್ನ ಹಿಂಡಿನಿಂದ ಬೇರ್ಪಟ್ಟ ವಯಸ್ಕ ಜಿರಾಫೆಯನ್ನು ಬೇಟೆಯಾಡಲು ಪ್ರಯತ್ನಿಸುವ ವಿಡಿಯೋ ಇದಾಗಿದ್ದು ಜಿರಾಫೆಯು ತನ್ನನ್ನು ತಾನು ರಕ್ಷಿಸಿಕೊಳ್ಳುವಾಗ ಕೋಪಗೊಂಡು ಸಿಂಹಿಣಿಯ ಮೇಲೆ ಕಾಲಿಡುತ್ತದೆ.
ಎತ್ತರದ ಜಿರಾಫೆಯು ನಂತರ ಸಿಂಹವನ್ನು ಹಲವು ಬಾರಿ ಒದೆಯುತ್ತದೆ. ಇದು ಸಿಂಹಿಣಿಯು ತನ್ನ ಪ್ರಾಣಕ್ಕಾಗಿ ಓಡುವಂತೆ ಮಾಡುತ್ತದೆ. ಜಿರಾಫೆಯ ಈ ಸಾಹಸದ ವಿಡಿಯೋಗೆ ಹಲವರು ಹುಬ್ಬೇರಿಸಿದ್ದಾರೆ.