ಶಿವಸೇನಾ ನಾಯಕ ಸಂಜಯ್ ರಾವತ್ ಬಿಜೆಪಿ ಹಾಗೂ ಶಿವಸೇನೆಯ ನಡುವಿನ ಸಂಬಂಧವನ್ನ ಬಾಲಿವುಡ್ ನಟ ಆಮೀರ್ ಖಾನ್ ಹಾಗೂ ಕಿರಣ್ ರಾವ್ ನಡುವಿನ ಸಂಬಂಧಕ್ಕೆ ಹೋಲಿಕೆ ಮಾಡಿದ್ದಾರೆ. ಮಾಜಿ ಮಿತ್ರ ಪಕ್ಷ ಬಿಜೆಪಿ ಹಾಗೂ ಶಿವಸೇನೆ ನಡುವಿನ ಸಂಬಂಧ ಭಾರತ- ಪಾಕಿಸ್ತಾನ ನಡುವಿನ ಸಂಬಂಧದಂತಿಲ್ಲ. ಬದಲಾಗಿ ಆಮೀರ್ ಖಾನ್ ಹಾಗೂ ಕಿರಣ್ ರಾವ್ ಸಂಬಂಧದಂತೆ ಇದೆ ಎಂದು ಹೇಳಿದ್ದಾರೆ.
ನಾವು ಭಾರತ – ಪಾಕಿಸ್ತಾನದವರಲ್ಲ. ಥೇಟ್ ಆಮೀರ್ ಖಾನ್ ಹಾಗೂ ಕಿರಣ್ ರಾವ್ ನಡುವಿನ ಸಂಬಂಧದಂತೆ. ನಮ್ಮ ರಾಜಕೀಯ ಚಿಂತನೆಗಳು ಭಿನ್ನ ಹಾಗಂತ ನಮ್ಮ ನಡುವಿನ ಸ್ನೇಹ ಮೊದಲಿನಂತೆ ಇದೆ ಎಂದು ಹೇಳಿದ್ರು.
ಬಾಲಿವುಡ್ ನಟ ಆಮೀರ್ ಖಾನ್ ಹಾಗೂ ಕಿರಣ್ ರಾವ್ ದಂಪತಿ ಶನಿವಾರ ತಮ್ಮ ಸುದೀರ್ಘ 15 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದರು. ನಾವು ಇನ್ಮೇಲೆ ಪತಿ – ಪತ್ನಿಯಲ್ಲ ಆದರೆ ನಾವು ಪೋಷಕರು ಹಾಗೂ ಒಂದೇ ಕುಟುಂಬದವರು ಎಂದು ಹೇಳಿಕೊಂಡಿದ್ದರು.
ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ನಮ್ಮ ಹಾಗೂ ಶಿವಸೇನೆಯ ನಡುವೆ ದ್ವೇಷತ್ವವಿಲ್ಲ. ಕೆಲವೊಂದು ವಿಚಾರಗಳಲ್ಲಿ ಮಾತ್ರ ಭಿನ್ನಾಭಿಪ್ರಾಯ ಇದೆ ಅಷ್ಟೇ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ರಾವತ್ ಈ ರೀತಿ ಹೇಳಿದ್ದಾರೆ.