ಪಿಂಚಣಿದಾರರು ಯಾವುದೇ ಅಡೆತಡೆ ಇಲ್ಲದೆಯೇ ಮಾಸಿಕ ಪಿಂಚಣಿಯನ್ನು ಪಡೆಯಬೇಕು ಅಂದರೆ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಿವುದು ಅವಶ್ಯಕವಾಗಿದೆ. ಈ ವರ್ಷ ಜೀವನ ಪ್ರಮಾಣ ಪತ್ರ ಸಲ್ಲಿಸಲು ನವೆಂಬರ್ 30 ಕೊನೆಯ ದಿನಾಂಕವಾಗಿದೆ. 80 ವರ್ಷ ಮೇಲ್ಪಟ್ಟ ವೃದ್ಧರಿಗೆ ಜೀವನ ಪ್ರಮಾಣ ಪತ್ರ ಸಲ್ಲಿಸಲು ಅಕ್ಟೋಬರ್ 1ರಿಂದಲೇ ಅವಕಾಶ ನೀಡಲಾಗಿದೆ. 80 ವರ್ಷ ಕೆಳಗಿನ ಪಿಂಚಣಿದಾರರು ನವೆಂಬರ್ 1ರಿಂದ ಜೀವನ ಪ್ರಮಾಣಪತ್ರವನ್ನು ಒದಗಿಸಲು ಆರಂಭಿಸಬಹುದಾಗಿದೆ.
ಜೀವನ ಪ್ರಮಾಣ ಪತ್ರ ಅಥವಾ ಲೈಫ್ ಸರ್ಟಿಫಿಕೇಟ್ ಪಿಂಚಣಿಯನ್ನು ಪಡೆಯಲು ನೀವು ಸಲ್ಲಿಸಲೇಬೇಕಾದ ಅತ್ಯವಶ್ಯಕ ಪ್ರಮಾಣ ಪತ್ರವಾಗಿದೆ. ಪಿಂಚಣಿ ಪಡೆಯುವ ವ್ಯಕ್ತಿಯು ಇನ್ನೂ ಬದುಕಿದ್ದಾರೆ ಎಂದು ಸಾಬೀತುಪಡಿಸುವ ದಾಖಲೆ ಇದಾಗಿದೆ.
ಸಾಮಾನ್ಯವಾಗಿ ಈ ಜೀವನ ಪ್ರಮಾಣ ಪತ್ರ ಸಲ್ಲಿಸಲು ಬಯಸುವ ಪಿಂಚಣಿದಾರರು ದಾಖಲೆಗಳನ್ನು ಒದಗಿಸಲು ವೈಯಕ್ತಿಕವಾಗಿ ಬ್ಯಾಂಕ್ಗಳ ಮುಂದೆ ಹಾಜರಿರಬೇಕಿತ್ತು. ಆದರೆ ಕಳೆದ ವರ್ಷದ ಕೋವಿಡ್ 19 ಅಪಾಯದ ಹಿನ್ನೆಲೆಯಲ್ಲಿ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ತಿಂಗಳಲ್ಲಿ 2 ದಿನ ಮಹಿಳಾ ಸಿಬ್ಬಂದಿಗೆ ಸಿಗಲಿದೆ ಮುಟ್ಟಿನ ರಜೆ
ಹಾಗಾದರೆ ಆನ್ಲೈನ್ ಮೂಲಕ ಜೀವನ ಪ್ರಮಾಣ ಪತ್ರವನ್ನು ಹೇಗೆ ಸಲ್ಲಿಸಬಹುದು ಎಂಬುದಕ್ಕೆ ಮಾಹಿತಿ ಇಲ್ಲಿದೆ ನೋಡಿ :
https://jeevanpramaan.gov.in/ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಜೀವನ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡಬಹುದಾಗಿದೆ. ಅಥವಾ ಅಪ್ಲಿಕೇಶನ್ ಸಹಾಯದಿಂದಲೂ ನೀವು ಈ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡಬಹುದು. ಇದಕ್ಕಾಗಿ ನೀವು ಮೊದಲು ಜೀವನ್ ಪ್ರಮಾಣ ಮೊಬೈಲ್ ಅಪ್ಲಿಕೇಶನ್ನ್ನು ಡೌನ್ಲೋಡ್ ಮಾಡಬೇಕು. ಅರ್ಜಿದಾರರು ಆಧಾರ್ ಸಂಖ್ಯೆ, ಪಿಂಚಣಿ ಪಾವತಿ ಆದೇಶ, ಬ್ಯಾಂಕ್ ಖಾತೆ ಸಂಖ್ಯೆ, ಬ್ಯಾಂಕ್ ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ಸಲ್ಲಿಸಬೇಕು. ಗುರುತಿಗಾಗಿ ಅರ್ಜಿದಾರ ವ್ಯಕ್ತಿಯು ಬಯೋಮೆಟ್ರಿಕ್ ದೃಢೀಕರಣ ನೀಡಬೇಕು. ದೃಢೀಕರಣ ಯಶಸ್ವಿಯಾದ ಬಳಿಕ ಜೀವನ ಪ್ರಮಾಣ ಪತ್ರ ಪೋರ್ಟಲ್ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ನ್ನು ಕಳುಹಿಸಲಿದೆ. ಇದರಲ್ಲಿ ಲೈಫ್ ಸರ್ಟಿಫಿಕೇಟ್ ಐಡಿ ಕೂಡ ಇರಲಿದೆ. ಈ ಐಡಿಯನ್ನು ನೀಡುವ ಮೂಲಕ ಲೈಫ್ ಸರ್ಟಿಫಿಕೇಟ್ನ್ನು ನೋಡಬಹುದಾಗಿದೆ.
ಡೋರ್ಸ್ಟೆಪ್ ಬ್ಯಾಂಕಿಂಗ್ ಅಪ್ಲಿಕೇಶನ್ ಮೂಲಕವೂ ಪ್ರಮಾಣ ಪತ್ರ ಸಲ್ಲಿಸಬಹುದಾಗಿದೆ. ಇದಕ್ಕಾಗಿ ಪಿಂಚಣಿದಾರರು ಡೋರ್ಸ್ಟೆಪ್ ಬ್ಯಾಂಕಿಂಗ್ ಅಪ್ಲಿಕೇಶನ್ನ್ನು ಗೂಗಲ್ ಪ್ಲೇಸ್ಟೋರ್ನಲ್ಲಿ ಡೌನ್ಲೋಡ್ ಮಾಡಬೇಕು. ಅಥವಾ https://doorstepbanks.com/ ಗೂ ಭೇಟಿ ನೀಡಬಹುದಾಗಿದೆ. ಇದಾದ ಬಳಿಕ ಪಿಂಚಣಿ ಖಾತೆ ಸಂಖ್ಯೆ ನಮೂದಿಸಬೇಕು. ಇದಾದ ಬಳಿಕ ಪಿಂಚಣಿದಾರರಿಗೆ ಒಂದು ಮೆಸೇಜ್ ಬರಲಿದೆ ಇಲ್ಲಿ. ಯಾವ ಬ್ಯಾಂಕ್ ಏಜೆಂಟ್ ನಿಮ್ಮ ಮನೆಗೆ ಬಂದು ಈ ಕಾರ್ಯವನ್ನು ಮಾಡಿಕೊಡಲಿದ್ದಾರೆ ಎಂಬುದರ ವಿವರಣೆ ಇರಲಿದೆ. ಬ್ಯಾಂಕಿಂಗ್ ಏಜೆಂಟ್ ಪಿಂಚಣಿದಾರರ ಮನೆಗೆ ಬಂದ ಬಳಿಕ ಮುಂದಿನ ಕೆಲಸವನ್ನು ಮಾಡಲಾಗುತ್ತದೆ.
ಥಟ್ಟಂತ ರೆಡಿಯಾಗುತ್ತೆ ರುಚಿ ರುಚಿ ಬೆಳ್ಳುಳ್ಳಿ ಚಟ್ನಿ
ಈ ಕಾರ್ಯ ವಿಧಾನವನ್ನು ಸುಲಭಗೊಳಿಸಲು, ಅಂಚೆ ಇಲಾಖೆ ಕೂಡ ಮನೆ ಬಾಗಿಲಿಗೆ ಸೇವೆ ಒದಗಿಸಿದೆ. ಪಿಂಚಣಿದಾದರರು ಪೋಸ್ಟ್ಇನ್ಫೋ ಅಪ್ಲಿಕೇಶನ್ ಡೌನ್ಲೋಡ್ ಮಾಡಬೇಕು. ಇದೊಂದು ಶುಲ್ಕ ಸಹಿತ ಸೇವೆಯಾಗಿದೆ. ಹಾಗೂ ಇದು ಕೇಂದ್ರ ಸರ್ಕಾರ ಪಿಂಚಣಿದಾರರಿಗೆ ಲಭ್ಯವಿದೆ.