ಈ ನಿಯಮದಡಿ, ಲ್ಯಾಪ್ಸ್ ಆದ ನಿಮ್ಮ ವಿಮೆಯನ್ನು ಆರು ತಿಂಗಳ ಒಳಗೆ ಮರುಜೀವ ಕೊಟ್ಟುಕೊಳ್ಳಬಹುದಾಗಿದೆ. ಆದರೆ ಇದಕ್ಕಾಗಿ ನೀವು ಪ್ರೀಮಿಯಂ ಜೊತೆಗೆ ಬಡ್ಡಿಯನ್ನು ಕಟ್ಟಬೇಕಾಗುತ್ತದೆ.
ವೈದ್ಯಕೀಯ ಆಧಾರದ ಮರುಪೂರಣ
ಪಾಲಿಸಿ ಅವಧಿಯಲ್ಲಿ ಹೂಡಿಕೆದಾರರು ಈ ಮರುಜೀವದ ಪ್ಲಾನ್ ಅನ್ನು ಒಮ್ಮೆ ಬಳಸಬಹುದಾಗಿದೆ. ಈ ಪ್ಲಾನ್ ಅಡಿ ಬರುವ ವೈದ್ಯಕೀಯ ಅಗತ್ಯಗಳನ್ನು ಎಲ್‌ಐಸಿ ನಿರ್ಧರಿಸಲಿದ್ದು, ಮರುಪೂರಣ ಮಾಡಬೇಕಾದ ಮೊತ್ತವನ್ನು ನಿರ್ಧರಿಸುತ್ತದೆ.
ವಿಶೇಷ ಮರುಪೂರಣ ಸ್ಕೀಂ
ಈ ನಿಯಮದಡಿ ಹೂಡಿಕೆದಾರರು ವಯಸ್ಸಿಗನುಸಾರವಾಗಿ ಮರುಪೂರಣದ ಅವಧಿಯಲ್ಲಿ ಹೂಡಿಕೆದಾರರು ಸಿಂಗಲ್ ಪ್ರೀಮಿಯಂ ಕಟ್ಟಬೇಕು. ಪೂರ್ಣ ಪ್ರೀಮಿಯಂ ಕಟ್ಟಿದ ಮೇಲೆಯೇ ಈ ವಿಶೇಷ ಮರುಪೂರಣ ಪ್ಲಾನ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಆರೋಗ್ಯವಂತರಾಗಿದ್ದೀರೆಂದು ವೈದ್ಯಕೀಯ ದಾಖಲೆಗಳ ಸಮೇತ ಸಾಬೀತುಪಡಿಸಬೇಕು.
ಕಂತು ಮರುಪೂರಣ ಸ್ಕೀಂ
ಈ ಸ್ಕೀಂನಡಿ ಪಾಲಿಸಿ ಲ್ಯಾಪ್ಸ್ ಆಗದಂತೆ ಹೂಡಿಕೆದಾರರಿಗೆ ಬಾಕಿಯನ್ನು ಕಂತುಗಳಲ್ಲಿ ಪಾವತಿ ಮಾಡಲು ಅವಕಾಶ ನೀಡಲಾಗುತ್ತದೆ.
ಸಾಲ ಕಂ ಮರುಪೂರಣ ಸ್ಕೀಂ
ಅದಾಗಲೇ ಹೂಡಿಕೆ ಮಾಡಿರುವ ತಮ್ಮದೇ ದುಡ್ಡಿನಿಂದ ಸಾಲ ಪಡೆಯುವ ಮೂಲಕ ಹೂಡಿಕೆದಾರರು ಪ್ರೀಮಿಯಂ ಬಾಕಿ ಕಟ್ಟಲು ಅವಕಾಶವನ್ನು ಈ ಸ್ಕೀಂ ಕೊಡುತ್ತದೆ.