alex Certify ಶ್ರೀಸಾಮಾನ್ಯರಿಗೆ ಭಾರತೀಯ ಜೀವ ವಿಮಾ ನಿಗಮದಿಂದ ಸಿಹಿ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ರೀಸಾಮಾನ್ಯರಿಗೆ ಭಾರತೀಯ ಜೀವ ವಿಮಾ ನಿಗಮದಿಂದ ಸಿಹಿ ಸುದ್ದಿ

ಶ್ರೀಸಾಮಾನ್ಯರಿಗೆ ಭಾರತೀಯ ಜೀವ ವಿಮಾ ನಿಗಮವು ಸಿಹಿ ಸುದ್ದಿಯೊಂದನ್ನ ನೀಡಿದೆ. ಎಲ್​​ಐಸಿ ಕಂಪನಿಯು ಸರಳ ಪಿಂಚಣಿ ಎಂಬ ಹೊಸ ಯೋಜನೆಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಈ ಹೊಸ ಯೋಜನೆಯು ಜೋಡಣೆ ಆಗದ, ನಾನ್ ಪಾರ್ಟಿಸಿಪೇಟಿಂಗ್​, ಸಿಂಗಲ್​ ಪ್ರೀಮಿಯಂ, ವೈಯಕ್ತಿಕ ಆನ್ಯುಯಿಟಿ ಪ್ಲಾನ್​ ಆಗಿದೆ. ಎಲ್​​ಐಸಿ ಪರಿಚಯಿಸಿರುವ ಈ ಸರಳ ಪಿಂಚಣಿ ಯೋಜನೆಯು ಜುಲೈ 1ರಿಂದ ಚಾಲ್ತಿಗೆ ಬಂದಿದೆ. 40 ರಿಂದ 80 ವರ್ಷದೊಳಗಿನವರು ಈ ಯೋಜನೆಗೆ ಸೇರ್ಪಡೆಯಾಗಬಹುದಾಗಿದೆ.

ಈ ಹೊಸ ಯೋಜನೆಯ ಬಗ್ಗೆ ಎಲ್​ಐಸಿ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಮಾಹಿತಿ ನೀಡಿದೆ. ಈ ಪತ್ರಿಕಾ ಪ್ರಕಟಣೆಯಲ್ಲಿ ಎಲ್​ಐಸಿ ಕಂಪನಿಯು ಇನ್ಷೂರೆನ್ಸ್ ರೆಗ್ಯುಲೇಟರಿ ಅಂಡ್ ಡೆವಲಪ್​ಮೆಂಟ್ ಅಥಾರಿಟಿ ಆಫ್ ಇಂಡಿಯಾದ ಮಾರ್ಗಸೂಚಿಯ ಅನ್ವಯ ವಾರ್ಷಿಕ ಯೋಜನೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದೆ.

ಈ ಪಾಲಿಸಿಯನ್ನ ಹೊಂದಿರುವ ವ್ಯಕ್ತಿ ಲಂಪ್​ಸಮ್​ ಮೊತ್ತ ಪಾವತಿಯನ್ನ ಎರಡು ಆಯ್ಕೆಗಳ ಪೈಕಿ ಒಂದನ್ನ ಆಯ್ಕೆ ಮಾಡಿಕೊಂಡು ಪಾವತಿ ಮಾಡಬಹುದಾಗಿದೆ.
ಲೈಫ್​ ಆನ್ಯುಯಿಟಿ ಜೊತೆಗೆ ಖರೀದಿ ದರದ 100 ಪ್ರತಿಶತ ವಾಪಸ್ಸಾತಿ ಹಾಗೂ ಜಂಟಿ ಲೈಫ್​ ಅಂದರೆ ಕೊನೆಯ ಪಾಲಿಸಿ ಖರೀದಿದಾರ ಬದುಕಿರುವವರೆಗೂ ಆನ್ಯೂಯಿಟಿ .

ಖರೀದಿ ಮೊತ್ತದ ರಿರ್ಟನ್ಸ್​ನ್ನು ಕೊನೆಯ ವ್ಯಕ್ತಿ ತನ್ನ ಜೀವಿತಾವಧಿಯ ಕೊನೆಯವರೆಗೂ ಆಫ್​ಲೈನ್​ ಇಲ್ಲವೇ ಆನ್​ಲೈನ್​ ಮೂಲಕ ಖರೀದಿ ಮಾಡಬಹುದಾಗಿದೆ. ಈ ಪಾಲಿಸಿಯನ್ನ ಹೊಂದಬೇಕು ಎಂದು ಬಯಸಿದವರು ಆಫ್​​ಲೈನ್​ ಇಲ್ಲವೇ ನೇರವಾಗಿ ಎಲ್​ಐಸಿ ಅಧಿಕೃತ ವೆಬ್​ಸೈಟ್​ನಲ್ಲಿ ಖರೀದಿ ಮಾಡಬಹುದಾಗಿದೆ. ಪಾಲಿಸಿ ಪ್ರಾರಂಭಿಸಿದ ಆರು ತಿಂಗಳ ಬಳಿಕ ಸಾಲ ಸೌಲಭ್ಯ ಲಭ್ಯವಿರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...