ವೃದ್ಧಾಪ್ಯದಲ್ಲಿ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದರೆ ನಿಮಗೊಂದು ನೆಮ್ಮದಿ ಸುದ್ದಿಯಿದೆ. ಎಲ್ ಐ ಸಿ, ವೃದ್ಧಾಪ್ಯದಲ್ಲಿ ಆರ್ಥಿಕ ರಕ್ಷಣೆ ನೀಡಲು ಉತ್ತಮ ಯೋಜನೆ ಶುರು ಮಾಡಿದೆ. ಎಲ್ಐಸಿ ಹೊಸ ಮತ್ತು ಐಷಾರಾಮಿ ಪಾಲಿಸಿ ಹೆಸರು, ‘ಜೀವನ ಶಾಂತಿ’ ಪಾಲಿಸಿ. ಒಮ್ಮೆ ನೀವು ಈ ಪಾಲಿಸಿಯಲ್ಲಿ ಹೂಡಿಕೆ ಮಾಡಿದರೆ, ಜೀವನ ಪೂರ್ತಿ ಆರಾಮವಾಗಿರಬಹುದು.
ಎಲ್ಐಸಿಯ ಈ ಯೋಜನೆ, ಹಳೆಯ ಯೋಜನೆ ಜೀವನ್ ಅಕ್ಷಯ್ ಹೋಲುತ್ತದೆ. ಜೀವನ್ ಶಾಂತಿ ಪಾಲಿಸಿಯಲ್ಲಿ ಎರಡು ಆಯ್ಕೆಗಳಿವೆ. ಮೊದಲನೆಯದು ತಕ್ಷಣದ ವರ್ಷಾಶನವಾದ್ರೆ, ಎರಡನೆಯದು ಮುಂದೂಡಲ್ಪಟ್ಟ ವರ್ಷಾಶನ.
ಇದು ಒಂದೇ ಪ್ರೀಮಿಯಂ ಯೋಜನೆಯಾಗಿದೆ. ಮೊದಲ ಅಂದರೆ ತಕ್ಷಣದ ವರ್ಷಾಶನದ ಅಡಿಯಲ್ಲಿ ಪಾಲಿಸಿ ತೆಗೆದುಕೊಂಡ ತಕ್ಷಣ ಪಿಂಚಣಿ ಸೌಲಭ್ಯ ಲಭ್ಯವಿದೆ. ಮುಂದೂಡಲ್ಪಟ್ಟ ವರ್ಷಾಶನದ ಆಯ್ಕೆಯಲ್ಲಿ, ಪಾಲಿಸಿಯನ್ನು ತೆಗೆದುಕೊಂಡ 5, 10, 15 ಅಥವಾ 20 ವರ್ಷಗಳ ನಂತರ ಪಿಂಚಣಿ ಸೌಲಭ್ಯ ಲಭ್ಯವಿದೆ.
ಈ ಯೋಜನೆಯಲ್ಲಿ ಪಿಂಚಣಿ ಮೊತ್ತವನ್ನು ನಿಗಧಿಪಡಿಸಿಲ್ಲ. ಹೂಡಿಕೆ, ವಯಸ್ಸು ಹಾಗೂ ಅವಧಿಯನ್ನು ಇದು ಅವಲಂಭಿಸಿರುತ್ತದೆ. ಕನಿಷ್ಠ 35 ವರ್ಷದಿಂದ ಗರಿಷ್ಠ 85 ವರ್ಷ ವಯಸ್ಸಿನ ವ್ಯಕ್ತಿಗಳು ಇದನ್ನು ಖರೀದಿಸಬಹುದು. ಇದ್ರಲ್ಲಿ ವಿವಿಧ ಆಯ್ಕೆಗಳಿವೆ. ಪಾಲಿಸಿ ತೆಗೆದುಕೊಳ್ಳುವ ಮೊದಲು ಇದ್ರ ಬಗ್ಗೆ ಸರಿಯಾಗಿ ಮಾಹಿತಿ ಪಡೆಯಬೇಕಾಗುತ್ತದೆ.