ಕೊರೊನಾ ಮನುಷ್ಯನ ಆಲೋಚನೆಯನ್ನು ಬದಲಿಸಿದೆ. ಜನರು ಉಳಿತಾಯ, ಹೂಡಿಕೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಮಕ್ಕಳ ಭವಿಷ್ಯದ ಬಗ್ಗೆ ಪಾಲಕರು ಹೂಡಿಕೆ ಮಾಡ್ತಿದ್ದಾರೆ. ಕಡಿಮೆ ಹೂಡಿಕೆ ಮಾಡಿ ಮಕ್ಕಳ ಭವಿಷ್ಯ ಬದಲಾಯಿಸುವ ಆಲೋಚನೆಯಲ್ಲಿದ್ದರೆ ಎಲ್ಐಸಿ ಉತ್ತಮ ಆಯ್ಕೆ. ಎಲ್ ಐಸಿಯ ನ್ಯೂ ಚಿಲ್ಡ್ರನ್ ಮನಿ ಬ್ಯಾಕ್ ಪ್ಲಾನ್ ನಿಮಗೆ ನೆರವಾಗಲಿದೆ.
ಮಗುವಿನ ಉತ್ತಮ ಭವಿಷ್ಯಕ್ಕಾಗಿ ಇಂದೇ ನ್ಯೂ ಚಿಲ್ಡ್ರನ್ ಮನಿ ಬ್ಯಾಕ್ ಪ್ಲಾನ್ ನಲ್ಲಿ ಹೂಡಿಕೆ ಮಾಡಲು ಶುರು ಮಾಡಿ. ಈ ಸಣ್ಣ ಉಳಿತಾಯದಿಂದ ಮುಂಬರುವ ಸಮಯದಲ್ಲಿ ಮಗು ಭವಿಷ್ಯ ಉಜ್ವಲವಾಗಬಹುದು. ಇದಕ್ಕಾಗಿ ನೀವು ಪ್ರತಿ ದಿನ 150 ರೂಪಾಯಿ ಉಳಿತಾಯ ಮಾಡಿದ್ರೆ ಸಾಕಾಗುತ್ತದೆ.
ಈ ಯೋಜನೆಯನ್ನು 25 ವರ್ಷಗಳವರೆಗೆ ನಿಗಧಿಪಡಿಸಲಾಗಿದೆ. ಮೆಚ್ಯೂರಿಟಿ ಮೊತ್ತವನ್ನು ಕಂತುಗಳಲ್ಲಿ ಪಡೆಯಬಹುದು. ಮಗುವಿಗೆ 18 ವರ್ಷ ತುಂಬಿದಾಗ ಸ್ವಲ್ಪ ಮೊತ್ತವನ್ನು ಪಾವತಿಸಲಾಗುತ್ತದೆ. 20 ವರ್ಷವಾದಾಗ ಎರಡನೇ ಬಾರಿ ಹಾಗೂ 22 ವರ್ಷವಾದಾಗ ಮೂರನೇ ಬಾರಿ ಪಾವತಿ ಮಾಡಲಾಗುತ್ತದೆ. ಪ್ರತಿ ಭಾರಿ ಮೊತ್ತದ ಶೇಕಡಾ 20ರಷ್ಟು ಸಿಗುತ್ತದೆ. 25 ವರ್ಷ ತುಂಬಿದಾಗ ಸಂಪೂರ್ಣ ಹಣವನ್ನು ಹಿಂತಿರುಗಿಸಲಾಗುತ್ತದೆ. ಜೊತೆಗೆ ಶೇಕಡಾ 40ರಷ್ಟು ಬೋನಸ್ ನೀಡಲಾಗುತ್ತದೆ.
ಈ ವಿಮೆಯ ಕಂತು ವಾರ್ಷಿಕವಾಗಿ 55,000 ರೂಪಾಯಿ. ಇದನ್ನು 365 ದಿನಗಳ ಪ್ರಕಾರ ನೋಡಿದರೆ, 25 ವರ್ಷಗಳಲ್ಲಿ ಒಟ್ಟು 14 ಲಕ್ಷ ರೂಪಾಯಿಗಳನ್ನು ಜಮಾ ಮಾಡಬೇಕು. ಮುಕ್ತಾಯದ ವೇಳೆಗೆ ಒಟ್ಟು 19 ಲಕ್ಷ ರೂಪಾಯಿ ಸಿಗಲಿದೆ. ಪಾಲಿಸಿಯನ್ನು ತೆಗೆದುಕೊಳ್ಳುವ ವಯಸ್ಸಿನ ಮಿತಿ ಶೂನ್ಯದಿಂದ 12 ವರ್ಷಗಳು.