ಹೂಡಿಕೆ ವಿಷ್ಯದಲ್ಲಿ ಭಾರತೀಯರ ದೃಷ್ಟಿಕೋನ ಬದಲಾಗ್ತಿದೆ. ಕೊರೊನಾ ನಂತ್ರ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದೇ ಕಾರಣಕ್ಕೆ ದೇಶದ ಅನೇಕ ದೊಡ್ಡ ದೊಡ್ಡ ಕಂಪನಿಗಳು ಈ ಕ್ಷೇತ್ರಕ್ಕೆ ಕಾಲಿಟ್ಟಿವೆ. ಹೊಸ ಐಪಿಒಗೆ ಕಾಯ್ತಿರುವ ಹೂಡಿಕೆದಾರರಿಗೆ ಖುಷಿ ಸುದ್ದಿಯೊಂದಿದೆ.
250 ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಮುಂದಾದ HPCL
ಜೀವ ವಿಮಾ ನಿಗಮ, ಮುಂದಿನ ತಿಂಗಳು ಐಪಿಒಗಾಗಿ ಸೆಬಿಗೆ ಕರಡು ಕಾಗದವನ್ನು ಸಲ್ಲಿಸಲಿದೆ. ವಿಶೇಷವೆಂದರೆ ಐಪಿಒ ಯಶಸ್ವಿಯಾಗಲು, ಎಲ್‌ಐಸಿಯ ಪಾಲಿಸಿದಾರರಿಗೆ ಸರ್ಕಾರವು ಒಟ್ಟು ಐಪಿಒದ ಶೇಕಡಾ 10ನ್ನು ಕಾಯ್ದಿರಿಸಲು ನಿರ್ಧರಿಸಿದೆ. ಇದ್ರಿಂದ ದೇಶದಲ್ಲಿರುವ ಸಣ್ಣ ಹೂಡಿಕೆದಾರರ ದೊಡ್ಡ ಜನಸಂಖ್ಯೆಯು ಎಲ್ಐಸಿಯ ಷೇರುದಾರರಾಗುವ ಅವಕಾಶವನ್ನು ಪಡೆಯುತ್ತದೆ.
ಇಲ್ಲಿದೆ ಐಪಿಎಲ್ ಫ್ರಾಂಚೈಸಿ ತಂಡಗಳ ಮಹಿಳಾ ಮಾಲೀಕರ ಪಟ್ಟಿ
ಮುಂದಿನ ವರ್ಷ ಜನವರಿಯಿಂದ ಮಾರ್ಚ್ ನಡುವೆ ಯಾವಾಗಲಾದ್ರೂ ಎಲ್ಐಸಿಯ ಐಪಿಒ ಬರಬಹುದು. ಇದು ಇಲ್ಲಿಯವರೆಗಿನ ದೇಶದ ಅತಿದೊಡ್ಡ ಐಪಿಒ ಆಗಿರಲಿದೆ. ಎಲ್‌ಐಸಿಯಲ್ಲಿ ಸರ್ಕಾರವು ಶೇಕಡಾ 5-10 ರಷ್ಟು ಪಾಲನ್ನು ಮಾರಾಟ ಮಾಡುವ ಸಾಧ್ಯತೆಯಿದೆ. ಎಲ್ಐಸಿಯು ವಿಮಾ ಕ್ಷೇತ್ರದಲ್ಲಿ ಸುಮಾರು ಶೇಕಡಾ 66 ರಷ್ಟು ಪಾಲನ್ನು ಹೊಂದಿದೆ. ಇದು 29 ಕೋಟಿ ಪಾಲಿಸಿದಾರರು, 12 ಲಕ್ಷ ಏಜೆಂಟರು ಮತ್ತು ಒಂದು ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿದೆ. ಎಲ್ಐಸಿಯ ಪಾಲಿಸಿದಾರರಿಗೆ ಐಪಿಒದಲ್ಲಿ ಶೇಕಡಾ 10 ರಷ್ಟು ಪಾಲನ್ನು ನೀಡಲು ಸರ್ಕಾರ ಎಲ್ಐಸಿ ಕಾಯ್ದೆ 1956 ಕ್ಕೆ ತಿದ್ದುಪಡಿ ತಂದಿದೆ. ಸರ್ಕಾರದ ಈ ಕ್ರಮದ ನಂತರ, ಎಲ್‌ಐಸಿ ಪಾಲಿಸಿದಾರ, ಷೇರುದಾರನಾಗಬಹುದು.