ಯಾವುದೇ ದುರಂತ, ಅಪಘಾತ, ದಾಳಿ ಸೇರಿ ಹಲವು ಕಾರಣಗಳಿಂದಾಗಿ ಗಾಯಗೊಂಡವರಿಗೆ ಪರಿಹಾರವಾಗಿ ಒಂದಷ್ಟು ಹಣ ನೀಡಲಾಗುತ್ತದೆ. ಬ್ರಿಟನ್‌ನಲ್ಲಿ ವ್ಯಕ್ತಿಯೊಬ್ಬ ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು, ಗಾಯಾಳು ಎಂದು ಸುಳ್ಳು ಹೇಳಿ ಪರಿಹಾರ ಕೇಳಿ ಈಗ ಜಾಲತಾಣದಲ್ಲಿ ತಾನು ಅಪ್‌ಲೋಡ್ ಮಾಡಿದ ಫೋಟೊಗಳಿಂದಲೇ ಸಿಕ್ಕಿಬಿದ್ದಿದ್ದಾನೆ.
ನಾರ್ತ್ ಯಾರ್ಕ್‌ಶೈರ್ ನಿವಾಸಿ 29 ವರ್ಷದ ಕ್ರಿಸ್ಟೋಫರ್ ಕ್ಲಿಂಟನ್ ಅವರ ಕಾರು 2016ರಲ್ಲಿ ಅಪಘಾತಕ್ಕೀಡಾಗಿದ್ದು, ಗಾಯಗೊಂಡಿದ್ದೇನೆ ಎಂದು ವಿಮೆ ಕ್ಲೇಮ್ ಮಾಡಿದ್ದಾರೆ. ಕಾರು ಅಪಘಾತದಲ್ಲಿ ಬೆನ್ನು ಮೂಳೆ, ತೊಡೆ ಹಾಗೂ ಬಲ ತೋಳಿಗೆ ಗಾಯಗಳಾಗಿದ್ದು, ವಿಮೆ ನೀಡಬೇಕು ಎಂದು ಕ್ಲೇಮ್ ಮಾಡಿದ್ದಾರೆ. ಪರಿಹಾರವಾಗಿ 50 ಸಾವಿರ ಡಾಲರ್ ಹಾಗೂ ಕಾನೂನು ವೆಚ್ಚವಾಗಿ 40 ಸಾವಿರ ಡಾಲರ್ ನೀಡಬೇಕು ಎಂಬುದಾಗಿ ಕ್ಲೇಮ್ ಮಾಡಿದ್ದಾರೆ. ಕಂಪನಿಯು ಸಹ ಇವರಿಗೆ ಪರಿಹಾರ ನೀಡಲು ಹಣ ಮೀಸಲಿಟ್ಟಿತ್ತು.
’ಕರ್ಮ ರಿಟರ್ನ್ಸ್’ ಎಂದರೆ ಇದೇ ಅಲ್ಲವೇ….? ಶ್ವಾನಕ್ಕೆ ಒದೆಯಲು ಹೋಗಿ ತಾನೇ ಬಿದ್ದ ವ್ಯಕ್ತಿ…!
ಕಂಪನಿಯು ಪರಿಹಾರದ ನೀಡುವ ಕೊನೆ ಕ್ಷಣಕ್ಕೂ ಮುನ್ನ ಕ್ರಿಸ್ಟೋಫರ್ ಅಪಘಾತದ ಕುರಿತು ತನಿಖೆ ನಡೆಸಲು ತೀರ್ಮಾನಿಸಿದೆ. ತನಿಖೆ ವೇಳೆ ಕ್ರಿಸ್ಟೋಫರ್ ಅವರಿಗೆ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ, ಅವರು ಟ್ರೆಕ್ಕಿಂಗ್ ಮಾಡಿದ, ಈಜಾಡಿದ ಹಾಗೂ ಸರ್ಫಿಂಗ್ ಮಾಡಿದ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದು, ಇವುಗಳನ್ನು ಗಮನಿಸಿದ ಕಂಪನಿಯು ವಿಮೆ ನೀಡುವುದನ್ನು ಸ್ಥಗಿತಗೊಳಿಸಿದೆ. ಬಳಿಕ ಕ್ರಿಸ್ಟೋಫರ್ ವಿರುದ್ಧ ಎಲ್ಲ ದಾಖಲೆಗಳನ್ನು ಸಂಗ್ರಹಿಸಿದ ವಿಮಾ ಕಂಪನಿಯು ಕೊನೆಗೂ ವಿಮೆ ನೀಡುವುದಿಲ್ಲಎಂದು ತಿಳಿಸಿದೆ. ಒಟ್ಟಿನಲ್ಲಿ ಸುಖಾಸುಮ್ಮನೆ ಸಾವಿರಾರು ಡಾಲರ್ ಕನಸು ಕಾಣುತ್ತಿದ್ದ ಕ್ರಿಸ್ಟೋಫರ್‌ಗೆ ನಿರಾಸೆಯಾಗಿದೆ.