ಕೊರೋನಾ ಬಂದ ಮೇಲೆ ಮಾಸ್ಕ್ ವ್ಯಾಲ್ಯೂ ಹೆಚ್ಚಾಗಿದೆ. ದಿನನಿತ್ಯ ಹೊರಗೆ ಹೋಗುವಾಗ ಮಾಸ್ಕ್ ಹಾಕಿಯೇ ಮನೆಯಿಂದ ಆಚೆ ಕಾಲಿಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದಿನಕ್ಕೊಂದರಂತೆ ಹೊಸ ಹೊಸ ಬಗೆಯ ಮಾಸ್ಕುಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ನಾವು ಉಸಿರಾಡುವ ಗಾಳಿ ನಾವೇ ಸೇವಿಸುವುದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತಾ ಹೇಳುತ್ತಾರೆ. ಇದೀಗ ಎಲ್ ಜಿ ಕಂಪನಿ ಹೈಟೆಕ್ ಫೇಸ್ ಮಾಸ್ಕ್ ನ್ನು ರಿಲೀಸ್ ಮಾಡಿದೆ.
ಹೌದು, ಎಲ್ ಜಿ ಹೊರತಂದಿರುವ ಹೈಟೆಕ್ ಫೇಸ್ ಮಾಸ್ಕ್ ಗಾಳಿಯನ್ನು ಶುದ್ಧೀಕರಿಸುತ್ತದೆ. ಇದು ಏರ್ ಪ್ಯೂರಿಫೈಯರ್ ಮುಖಗವಸು ಆಗಿದೆ. ಉಸಿರಾಡುವ ಗಾಳಿಯನ್ನು ಶುದ್ಧೀಕರಿಸುವುದು ಮಾತ್ರವಲ್ಲದೆ ದೈನಂದಿನ ಬಳಕೆಗೆ ಆರಾಮಾದಾಯಕವಾಗಿ ಬಳಸಬಹುದಾಗಿದೆ.
ಅಲ್ಲದೆ ಬೇರೊಬ್ಬರ ಜೊತೆ ಮಾತನಾಡುವಾಗ ಮಾಸ್ಕ್ ಕೆಳಗಿಳಿಸಿ ಮಾತನಾಡಬೇಕೆಂದಿಲ್ಲ. ಇದರಲ್ಲಿ ವಾಯ್ಸ್ ಆನ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಹೀಗಾಗಿ ಬಳಕೆದಾರರು ಮಾತನಾಡುವಾಗ ತಂತ್ರಜ್ಞಾನವು ಗುರುತಿಸುತ್ತದೆ. ಸ್ಪೀಕರ್ ಮೂಲಕ ಧ್ವನಿ ಜೋರಾಗಿ ಕೇಳುತ್ತದೆ. ಹೀಗಾಗಿ ಕೇಳುಗರಿಗೆ ಧ್ವನಿ ಕೇಳುತ್ತಿಲ್ಲ ಅಂತಾ ಪ್ರಯಾಸಪಡಬೇಕಿಲ್ಲ
UPSC ಆಕಾಂಕ್ಷಿಗಳಿಗೆ ಬಿಗ್ ಶಾಕ್: ಮತ್ತೊಂದು ಅವಕಾಶ ನೀಡುವ ಕುರಿತು ಕೇಂದ್ರದಿಂದ ಮಹತ್ವದ ಹೇಳಿಕೆ
ಇದೊಂದು ದಿನವಿಡಿ ಧರಿಸಬಹುದಾದ ಹಗುರವಾದ ಮುಖಗವಸು ಆಗಿದೆ. ಇದರ ತೂಕ ಕೇವಲ 94 ಗ್ರಾಂ ಹಾಗೂ 1000 ಎಂಎಎಫ್ ಬ್ಯಾಟರಿ ಹೊಂದಿದ್ದು, 8 ಗಂಟೆಗಳವರೆಗೆ ಧರಿಸಬಹುದು. ಮೂಗು ಮತ್ತು ಗಲ್ಲದ ಸುತ್ತಲೂ ಗಾಳಿ ಸೋರಿಕೆಯನ್ನು ಕಡಿಮೆ ಮಾಡುತ್ತದೆ ಎಂದು ಕಂಪನಿ ತಿಳಿಸಿದೆ. ಥೈಲ್ಯಾಂಡ್ ನಲ್ಲಿ ಆಗಸ್ಟ್ ತಿಂಗಳಲ್ಲಿ ಈ ಸಾಧನವನ್ನು ಪರಿಚಯಿಸಲಾಗುತ್ತಿದೆ. ಇದರ ಬೆಲೆಯನ್ನು ಇನ್ನೂ ಕಂಪನಿ ಘೋಷಿಸಿಲ್ಲ.
ದಕ್ಷಿಣ ಕೊರಿಯಾ ಟೆಕ್ ದೈತ್ಯರು ಹೇಳುವ ಪ್ರಕಾರ, ಸಾಮಾನ್ಯವಾಗಿ ಮುಖಗವಸು ಧರಿಸುವಾಗ ಬೆವರುವುದು, ಗಟ್ಟಿಯಾಗಿ ಉಸಿರಾಡುವಾಗ ಗಾಳಿಯ ಹರಿವನ್ನು ನಿರ್ಬಂಧಿಸುತ್ತದೆ. ಆದ್ದರಿಂದ ಇದು ಕೇವಲ ಸುರಕ್ಷತೆಗಾಗಿ ಉತ್ಪನ್ನವನ್ನು ಮಾಡಲು ನಿರ್ಧರಿಸಿದೆ. ಅಲ್ಲದೆ ಅನಾನುಕೂಲತೆಯನ್ನು ಕಡಿಮೆ ಮಾಡಿ ಗಾಳಿಯ ಸಮಸ್ಯೆಗೆ ಪರಿಹಾರ ನೀಡುವಲ್ಲಿ ಸಹಕಾರಿಯಾಗಿದೆ. ಇದು ಸಾಂಪ್ರದಾಯಿಕ ಮಾಸ್ಕ್ ಗಳಿಗಿಂತ ಪರಿಣಾಮಕಾರಿಯಾಗಿರುವುದು ಮಾತ್ರವಲ್ಲದೆ ಸೊಗಸಾಗಿಯೂ ಕಾಣುತ್ತದೆ ಎಂದು ಹೇಳಿದ್ದಾರೆ.