alex Certify 100 ವರ್ಷಗಳ ಬಳಿಕ ತಲುಪಿದ ಪತ್ರ…..! ಅಂಚೆಯ ಅಚ್ಚರಿ ಕಥೆಯಿದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

100 ವರ್ಷಗಳ ಬಳಿಕ ತಲುಪಿದ ಪತ್ರ…..! ಅಂಚೆಯ ಅಚ್ಚರಿ ಕಥೆಯಿದು

ಕೆಲವೇ ಕೆಲವು ವರ್ಷಗಳ ಹಿಂದೆ ಡಿಜಿಟಲ್​ ಮೀಡಿಯಾ ಇಲ್ಲದ ಕಾಲದಲ್ಲಿ ಪತ್ರಗಳನ್ನು ಕೈಯಿಂದ ಬರೆದು ಕಳುಹಿಸಲಾಗುತ್ತಿತ್ತು. ಅದರಲ್ಲಿರುವ ಆತ್ಮೀಯತೆ ಇಂದಿನ ಡಿಜಿಟಲ್​ ಯುಗದ ಸಂದೇಶಗಳಲ್ಲಿ ಇಲ್ಲ ಎನ್ನುವುದು ಸುಳ್ಳಲ್ಲ. ಆದರೆ ಈಗ ಪತ್ರಗಳ ಬಗ್ಗೆ ಎಷ್ಟೋ ಯುವ ಪೀಳಿಗೆಗೆ ಗೊತ್ತೇ ಇಲ್ಲ ಬಿಡಿ.

ಈ ವಿಷಯ ಇಲ್ಲೇಕೆ ಎಂದರೆ ಅಂಚೆ ಕಾಲದ ವಿಚಿತ್ರ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಇಲ್ಲಿರುವ ಈ ಪತ್ರವನ್ನು 1916ರಲ್ಲಿ ಇಂಗ್ಲೆಂಡ್​ನ ಬಾತ್​ನಿಂದ ಪೋಸ್ಟ್ ಮಾಡಲಾಗಿದೆ. ಈ ಪತ್ರದ ಮೇಲೆ ಕಿಂಗ್ ಜಾರ್ಜ್-5 ​ ಸ್ಟ್ಯಾಂಪ್​ ಇದೆ.

ಆದರೆ ಈ ಪತ್ರ ತಲುಪಬೇಕಾದ ವಿಳಾಸವನ್ನು ತಲುಪಿದ್ದು 100 ವರ್ಷಗಳ ಬಳಿಕ. ಮೊದಲನೇ ವಿಶ್ವಯುದ್ಧದ ಸಂದರ್ಭದಲ್ಲಿ ಈ ಪತ್ರವನ್ನು ರವಾನಿಸಲಾಗಿದೆ. ಆ ಸಂದರ್ಭದಲ್ಲಿ ಕಿಂಗ್​ ಜಾರ್ಜ್​-5 ಆಡಳಿತವಿತ್ತು. ಆದರೆ ಇದು ತಲುಪಿದ್ದು ಮಾತ್ರ ನೂರು ವರ್ಷಗಳ ನಂತರ ಎನ್ನುವುದು ಅಚ್ಚರಿ ಮತ್ತು ವಿಸ್ಮಯ.

2021 ರಲ್ಲಿ ದಕ್ಷಿಣ ಲಂಡನ್​ನಲ್ಲಿರುವ ಗ್ಲೆನ್​ ಮತ್ತು ಆತನ ಗೆಳತಿ ವಾಸವಾಗಿದ್ದ ಫ್ಲ್ಯಾಟ್​ಗೆ ಇದು ತಲುಪಿದೆ. ಗ್ಲೆನ್​, ಈ ಪತ್ರವನ್ನು ಸ್ಥಳೀಯ ಐತಿಹಾಸಿಕ ಸಂಶೋಧನಾ ಕೇಂದ್ರಕ್ಕೆ ತಲುಪಿಸಿದ್ದಾರೆ. ಸಂಶೋಧನೆಯ ಮೂಲಕ ತಿಳಿದು ಬಂದಿರುವುದೇನೆಂದರೆ, ಮೊದಲನೇ ವಿಶ್ವಯುದ್ಧದ ಸಂದರ್ಭದಲ್ಲಿ ಕಟೀ ಮಾರ್ಶ್​ ಎನ್ನುವವರು ಬಾತ್​​ನಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದ ಕ್ರಿಸ್ಟಾಬೆಲ್​ ಮೆನ್ನೆಲ್ ಎನ್ನುವವರಿಗೆ ಬರೆದ ಪತ್ರವು ಇದಾಗಿದೆ. ಇವರಿಬ್ಬರೂ ಸ್ನೇಹಿತೆಯರಾಗಿದ್ದರು ಎನ್ನಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...