
ಮಳೆಗಾಲದ ಗಾಳಿ ಕೂದಲನ್ನು ನಿರ್ಜೀವಗೊಳಿಸುತ್ತದೆ. ಈ ಋತುವಿನಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ. ಮಳೆಗಾಲದಲ್ಲಿ ಕೂದಲಿಗೆ ವಿಶೇಷ ಆರೈಕೆ ಅಗತ್ಯವಿದೆ.
ಕೂದಲು ಶುಷ್ಕವಾಗುವುದನ್ನು ತಡೆಯಲು ಬಾದಾಮಿ ಎಣ್ಣೆ, ತೆಂಗಿನ ಎಣ್ಣೆ ಹಾಗೂ ಬೇವಿನ ಎಣ್ಣೆಯನ್ನು ಸಮ ಪ್ರಮಾಣದಲ್ಲಿ ಬೆರೆಸಿ ತಲೆಗೆ ಮಸಾಜ್ ಮಾಡಿಕೊಳ್ಳಿ. ಇದ್ರಿಂದ ಕೂದಲು ಉದುರುವುದಾಗ್ಲಿ, ಕವಲೊಡೆಯುವ ಸಮಸ್ಯೆ ಕಾಡುವುದಿಲ್ಲ. ಬೇವಿನ ಎಣ್ಣೆ ಬೆವರಿನಿಂದ ಬರುವ ತುರಿಕೆಯನ್ನು ನಿಯಂತ್ರಿಸುತ್ತದೆ.
ಮಳೆಗಾಲದಲ್ಲಿ ಅವಶ್ಯವಾಗಿ ವಾರದಲ್ಲಿ ಎರಡು ದಿನ ಎಣ್ಣೆ ಮಸಾಜ್ ಮಾಡಬೇಕು.
ಗುಂಗುರು, ದಪ್ಪ ಕೂದಲು ಸಿಕ್ಕಾಗುತ್ತದೆ. ಹಾಗಾಗಿ ಕಂಡಿಷನರ್ ಶಾಂಪೂ ಬಳಕೆ ಒಳ್ಳೆಯದು. ನೈಸರ್ಗಿಕ ಶಾಂಪೂ, ಕಂಡೀಷನರ್ ಬಳಸುವುದು ಬಹಳ ಮುಖ್ಯ
ಈಗಾಗಲೇ ಕೂದಲು ಉದುರುವ ಸಮಸ್ಯೆಯಿಂದ ಬಳಲುತ್ತಿರುವವರು ಸಲ್ಫೇಟ್ ಮುಕ್ತ ಶಾಂಪೂ ಬಳಸಬೇಕು. ಸಲ್ಫೇಟ್ ಶಾಂಪೂ ಕೂದಲಿಗೆ ಅಧಿಕ ಪ್ರಮಾಣದಲ್ಲಿ ಹಾನಿಯುಂಟು ಮಾಡುತ್ತದೆ.
ಕೇಶ ವಿನ್ಯಾಸ ಉಪಕರಣ ಹಾಗೂ ಹೇರ್ ಡ್ರೈಯರ್ ನಿಮ್ಮ ಕೂದಲಿನ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎಂಬುದು ನೆನಪಿರಲಿ.
ಕೂದಲು ಉದುರುವುದನ್ನು ತಡೆಯಲು ನೆತ್ತಿ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಮಳೆಗಾಲದಲ್ಲಿ ಕೂದಲು ಒದ್ದೆಯಾದ್ರೆ ತಲೆಸ್ನಾನ ಮಾಡುವುದನ್ನು ಮರೆಯಬೇಡಿ.
ನೆತ್ತಿಯಲ್ಲಿ ಹೆಚ್ಚು ತುರಿಕೆ, ಹೊಟ್ಟಿನ ಸಮಸ್ಯೆಯಿದ್ದರೆ ವಾರಕ್ಕೆ ಕನಿಷ್ಠ ಎರಡು ಬಾರಿ ಶಾಂಪೂ ಸ್ನಾನ ಮಾಡಿ.