alex Certify ಎಷ್ಟು ಕಾಲದವರೆಗೆ ಪರಿಣಾಮಕಾರಿ ಕೊರೊನಾದ ಎರಡು ಡೋಸ್ ಲಸಿಕೆ…? ಆತಂಕ ಹುಟ್ಟಿಸುತ್ತೆ ಈ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಷ್ಟು ಕಾಲದವರೆಗೆ ಪರಿಣಾಮಕಾರಿ ಕೊರೊನಾದ ಎರಡು ಡೋಸ್ ಲಸಿಕೆ…? ಆತಂಕ ಹುಟ್ಟಿಸುತ್ತೆ ಈ ಮಾಹಿತಿ

ಬಹಳ ಸಣ್ಣ ರಾಷ್ಟ್ರ ಇಸ್ರೇಲ್‌ನಲ್ಲಿ ಎಲ್ಲ ಜನರಿಗೂ ಕೊರೊನಾ ನಿರೋಧಕ ಲಸಿಕೆಯ ಎರಡೂ ಡೋಸ್‌ಗಳನ್ನು ನೀಡಲಾಗಿದ್ದರೂ ಕೂಡ ಸದ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಸ್ಫೋಟಗೊಂಡು ಭಯ ಹೆಚ್ಚಿಸುತ್ತಿದೆ. ಐವರಲ್ಲಿ ಮೂವರು ಇಸ್ರೇಲಿಗರು ಎರಡೂ ಡೋಸ್‌ ಪಡೆದಾಗಿದೆ. ಹಾಗಿದ್ದೂ ರೂಪಾಂತರಿ ಕೊರೊನಾ ಸೋಂಕು, ಲಸಿಕೆಯ ಪರಿಣಾಮವನ್ನೇ ಕುಗ್ಗಿಸುತ್ತಿದೆ ಎನ್ನುತ್ತಿದ್ದಾರೆ ತಜ್ಞವೈದ್ಯರು. ಇದು ಭಾರತಕ್ಕೆ ಎಚ್ಚರಿಕೆಯ ಪಾಠವು ಕೂಡ ಹೌದು.

ಎರಡು ಡೋಸ್‌ ಕೊರೊನಾ ಪಡೆದ ಆರು ತಿಂಗಳ ನಂತರ ಹಲವರಲ್ಲಿ ಕೊರೊನಾ ವಿರುದ್ಧದ ಪ್ರತಿಕಾಯಗಳು ಕಡಿಮೆ ಆಗುತ್ತಿದೆ. ಹಾಗಾಗಿ ಕೊರೊನಾ ಸೋಂಕಿನಿಂದ ಜನರು ಪುನಃ ಬಾಧಿತರಾಗುತ್ತಿದ್ದಾರೆ ಎಂದು ಇಸ್ರೇಲ್‌ ಆರೋಗ್ಯ ಸಚಿವಾಲಯದ ಮುಖ್ಯಸ್ಥ ನಾಶ್‌ಮನ್‌ ಆಷ್‌ ಗಾಬರಿ ವ್ಯಕ್ತಪಡಿಸಿದ್ದಾರೆ. 2020 ರ ಡಿ. 19 ರಿಂದಲೇ ಇಸ್ರೇಲ್‌ನಲ್ಲಿ ಸಾರ್ವಜನಿಕವಾಗಿ ಕೊರೊನಾ ಲಸಿಕಾ ಅಭಿಯಾನ ಆರಂಭಿಸಲಾಗಿದೆ.

ಶೀಘ್ರವೇ ಅನಿವಾರ್ಯವಾಗಲಿದೆ ಕೊರೊನಾ ಲಸಿಕೆ 4ನೇ ಡೋಸ್

ಈ ಬಗ್ಗೆ ಅಮೆರಿಕ, ಬ್ರಿಟನ್‌, ಫ್ರಾನ್ಸ್‌ ರಾಷ್ಟ್ರಗಳು ಕೂಡ ಗಂಭೀರವಾಗಿ ಚಿಂತಿಸಿ, ಬೂಸ್ಟರ್‌ ಡೋಸ್‌ಗಳನ್ನು ನೀಡಲು ಶುರು ಮಾಡಿವೆ. ಅಂದರೆ ಮೂರನೇ ಡೋಸ್‌. ಒಟ್ಟು ಎರಡು ಡೋಸ್‌ ಕೊರೊನಾ ಲಸಿಕೆ ಪಡೆದು ಆರು ತಿಂಗಳ ಅವಧಿ ಪೂರ್ಣಗೊಳಿಸಿರುವವರಿಗೆ ಬೂಸ್ಟರ್‌ ಡೋಸ್‌ ನೀಡಲಾಗುತ್ತಿದೆ.

ಆದರೆ, ಇದರ ಬದಲಿಗೆ ವಿಶ್ವದ ಎಲ್ಲ ರಾಷ್ಟ್ರಗಳ ಕಟ್ಟಕಡೆಯ ಜನರವರೆಗೆ ಕೊರೊನಾ ನಿರೋಧಕ ಲಸಿಕೆಯ ಮೊದಲ ಡೋಸ್‌ ತಲುಪಿಸಿರಿ ಎಂದು ಅಮೆರಿಕದ ವಿಜ್ಞಾನಿ ಫಿಲಿಪ್‌ ಕ್ರಾಸಿ ಸಲಹೆ ಕೊಟ್ಟಿದ್ದಾರೆ.

ಭೂಮಿಯ ಮೇಲೆ ಕೊರೊನಾ ಸೋಂಕಿತರು ಒಂದು ಸಣ್ಣ ಗುಂಪು ಇರುವವರೆಗೂ, ಆ ವೈರಾಣು ಪುನಃ ರೂಪಾಂತರಗೊಂಡು ಸ್ವಾಭಾವಿಕವಾಗಿ ಇತರರ ದೇಹ ಹೊಕ್ಕಲು ಯತ್ನಿಸಲಿದೆ. ಹಾಗಾಗಿ ಕೊರೊನಾ ಪ್ರೊಟೀನ್‌ ಎಲ್ಲ ಜನರ ದೇಹಕ್ಕೆ ಪರಿಚಿತಗೊಳ್ಳಬೇಕು. ಇದು ಲಸಿಕೆ ನೀಡುವಿಕೆಯಿಂದ ಮಾತ್ರವೇ ಸಾಧ್ಯ ಎಂದಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...