alex Certify ಧಾರ್ಮಿಕ ನಂಬಿಕೆಯಾಗಿ ಇಲ್ಲಿ ನಡೆಯುತ್ತೆ ಹೆಣ್ಣು – ಹೆಣ್ಣಿನ ನಡುವೆ ವಿವಾಹ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧಾರ್ಮಿಕ ನಂಬಿಕೆಯಾಗಿ ಇಲ್ಲಿ ನಡೆಯುತ್ತೆ ಹೆಣ್ಣು – ಹೆಣ್ಣಿನ ನಡುವೆ ವಿವಾಹ…!

ಸಲಿಂಗ ವಿವಾಹಗಳು ಈಗ ಸಾಮಾನ್ಯ ಸಂಗತಿಯಾಗುತ್ತಿರಬಹುದು. ಆದರೆ ಕರ್ನಾಟಕದ ಒಂದು ಬುಡಕಟ್ಟು ಸಮುದಾಯವು ಸಲಿಂಗ ವಿವಾಹವನ್ನು ಧಾರ್ಮಿಕ ನಂಬಿಕೆಯಾಗಿ ಬಹಳ ಸಮಯದಿಂದ ಅನುಸರಿಸುತ್ತಿದೆ.

ಅದು ಯಾವಾಗ ಮತ್ತು ಹೇಗೆ ಪ್ರಾರಂಭವಾಯಿತು ಎಂಬುದು ಈಗ ಸಮುದಾಯದಲ್ಲಿ ವಾಸಿಸುವ ಯಾರಿಗೂ ತಿಳಿದಿಲ್ಲ. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಒಕ್ಕಲಿಗ ಸಮುದಾಯದಲ್ಲಿ ಅದ್ಧೂರಿಯಾಗಿ ಆಚರಿಸಲಾಗುವ ಎರಡು ಹೆಣ್ಣುಮಕ್ಕಳ ನಡುವಿನ ವಿವಾಹವನ್ನು ದಡ್ಡುವೆ ಮದುವೆ ಎಂದು ಕರೆಯಲಾಗುತ್ತದೆ. ಇಬ್ಬರು ಹೆಣ್ಣುಗಳಲ್ಲಿ ಇಬ್ಬರೂ ಸೀರೆಯುಟ್ಟಿದ್ದರೆ ಒಬ್ಬರು ವರ ಮತ್ತು ಇನ್ನೊಬ್ಬರು ವಧುವಿನ ಪಾತ್ರವನ್ನು ನಿರ್ವಹಿಸುತ್ತಾರೆ.

ಸಾಮಾನ್ಯ ದಿಬ್ಬಣದಂತೆ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಗುತ್ತದೆ, ಸಾಮಾನ್ಯ ವಿವಾಹದ ಎಲ್ಲಾ ವಿಧಿವಿಧಾನಗಳನ್ನು ಅನುಸರಿಸಲಾಗುತ್ತದೆ.
ಅಂತಹ ದಡ್ಡುವೆ ಮದುವೆ ಇತ್ತೀಚೆಗೆ ಕರ್ಕಿವಿನಾಯಕ ಮತ್ತು ಕರಿಯಮ್ಮ ದೇವಸ್ಥಾನದಲ್ಲಿ ನೆರವೇರಿತು. ಮಳೆ ಕರುಣಿಸಲಿ ಎಂದು ಇಂದ್ರನನ್ನು ಪ್ರಾರ್ಥಿಸಲು ಈ ಹೆಣ್ಣು-ಹೆಣ್ಣಿನ ವಿವಾಹವನ್ನು ಪ್ರತಿ ವರ್ಷ ನಡೆಸಲಾಗುತ್ತದೆ. ಮಳೆ ಅಗತ್ಯಕ್ಕಿಂತ ಹೆಚ್ಚು ಅಥವಾ ಕಡಿಮೆ ಆಗಬಾರದು ಎಂದು ಆದಿವಾಸಿಗಳು ದೇವರನ್ನು ಪ್ರಾರ್ಥಿಸುತ್ತಾರೆ.

ದಿಬ್ಬಣದ ಮೆರವಣಿಗೆ, ಧಾರ್ಮಿಕ ವಿಧಿಗಳ ನಂತರ ನವದಂಪತಿಗಳನ್ನು ಅಲ್ಲಿದ್ದ ಎಲ್ಲರೂ ಆಶೀರ್ವದಿಸುತ್ತಾರೆ. ಸಾಮಾನ್ಯ ಮದುವೆಯಂತೆಯೇ ಜನರು ಅವರಿಗೆ ಉಡುಗೊರೆಗಳನ್ನು ಸಹ ನೀಡುತ್ತಾರೆ. ಸಂಗೀತ ಮತ್ತು ನೃತ್ಯ ಕೂಡ ಅಲ್ಲಿತ್ತು. ಮದುವೆಯಲ್ಲಿ ಭಾಗವಹಿಸಿದ ಎಲ್ಲರಿಗೂ ರುಚಿಕರ ಔತಣವನ್ನು ನೀಡಲಾಯಿತು.

ಈ ಮದುವೆಯಲ್ಲಿ ಬಹಳಷ್ಟು ವಿನೋದವೂ ಇದೆ. ಜನರು ನವವಿವಾಹಿತರ ಕುತ್ತಿಗೆಗೆ ಚಿಪ್ಸ್​ ಪ್ಯಾಕೆಟ್​ಗಳ ಹಾರವನ್ನು ಹಾಕುತ್ತಾರೆ. ಎಲ್ಲಾ ಆಚರಣೆಯ ನಂತರ, ಎಲ್ಲರೂ ತಮ್ಮ ಮನೆಗಳಿಗೆ ಹಿಂದಿರುಗುತ್ತಾರೆ. ಹಾಗೆಂದು ಇದೇನು ಸಲಿಂಗ ವಿವಾಹವಲ್ಲ ಧಾರ್ಮಿಕ ನಂಬಿಕೆಯಷ್ಟೇ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...