ಲೆಬನಾನ್ ಪ್ರಸ್ತುತ ತನ್ನ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹೀಗಿರುವಾಗ ಕಳೆದ ವಾರ ವ್ಯಕ್ತಿಯೊಬ್ಬ ಲೆಬನಾನ್ನ ಬೈರುತ್ನಲ್ಲಿ ಬ್ಯಾಂಕ್ನೊಳಗೆ ಬ್ಯಾಂಕ್ ಸಿಬ್ಬಂದಿಯನ್ನು ಒತ್ತೆಯಾಳಾಗಿ ಇಟ್ಟುಕೊಂಡು ತನ್ನ ಉಳಿತಾಯವನ್ನು ಪಡೆಯಲು ಪ್ರಯತ್ನ ಮಾಡಿದ್ದಾನೆ. ಆತನ ಸಾಹಸಕ್ಕೆ ಅಲ್ಲಿನ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಬಸ್ಸಾಮ್ ಅಸ್-ಶೇಖ್ ಹುಸೇನ್ ಬೈರುತ್ನಲ್ಲಿ ಫುಡ್ ಡೆಲವರಿ ಚಾಲಕರಾಗಿ ಕೆಲಸ ಮಾಡುತ್ತಾನೆ. ಕಳೆದ ಗುರುವಾರ ಶಾಟ್ಗನ್ನೊಂದಿಗೆ ಬ್ಯಾಂಕ್ ಪ್ರವೇಶಿಸಿ, 10 ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾನೆ.
ತನ್ನ ತಂದೆಯ ವೈದ್ಯಕಿಯ ಬಿಲ್ಗಳನ್ನು ಪಾವತಿಸಲು ಬ್ಯಾಂಕಿನಲ್ಲಿ ಉಳಿದಿದ್ದ ಉಳಿತಾಯದ ಹಣ ಪಡೆಯಲು ಈ ರೀತಿ ಮಾಡಿದ್ದ. ಆತ ಮೂರು ಗುಂಡುಗಳನ್ನು ಹಾರಿಸಿ ಎಚ್ಚರಿಸಿದ್ದ. ಮತ್ತು ಬ್ಯಾಂಕಿಗೆ ಬೀಗ ಹಾಕಿ ತನ್ನ ಉಳಿತಾಯದ ಹಣ ಕೊಡದೇ ಇದ್ದರೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದ.
ಅವನು ಅಂತಿಮವಾಗಿ ತನ್ನ 35,000 ಡಾಲರ್ (28 ಲಕ್ಷ ರೂ.) ಪಡೆದುಕೊಳ್ಳುವ ಬದಲು ಶರಣಾಗಿದ್ದು, ಕೊನೆಗೆ ಬಂಧಿಸಲ್ಪಟ್ಟಿದ್ದಾನೆ. ಲೆಬನಾನ್ನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, 2019 ರಲ್ಲಿ ಅಲ್ಲಿನ ಪರಿಸ್ಥಿತಿ ಬಿಡಗಾಯಿಸಲು ಪ್ರಾರಂಭವಾಯಿತು. ಸಾರ್ವಜನಿಕರ ವಿದೇಶಿ ಕರೆನ್ಸಿ ಉಳಿತಾಯದ ಹಿಂಪಡೆಯುವಿಕೆಗೆ ಕಟ್ಟುನಿಟ್ಟಾದ ನಿಯಮಗಳನ್ನು ಹಾಕಲಾಗಿದೆ.
ಒತ್ತೆಯಾಳು ಪರಿಸ್ಥಿತಿಯನ್ನು ವ್ಯವಹರಿಸುವಾಗ ಬಸ್ಸಮ್ ಅವರ ಪತ್ನಿ ಬ್ಯಾಂಕಿನ ಹೊರಗಿದ್ದರು. ಅವನು ಏನು ಮಾಡಬೇಕೋ ಅದನ್ನು ಅವನು ಮಾಡಿದ್ದಾನೆ ಎಂದು ಅವರು ಹೇಳಿದರು.
ಈ ವೇಳೆ ಜನಸಮೂಹವು ಬ್ಯಾಂಕ್ನ ಹೊರಗೆ ಜಮಾಯಿಸಲು ಪ್ರಾರಂಭಿಸಿತು. ಸರ್ಕಾರದ ವಿರುದ್ಧ ಪ್ರತಿಭಟಿಸುವಾಗ “ನೀವು ಒಬ್ಬ ವೀರ” ಎಂದು ಘೋಷಣೆಗಳನ್ನು ಕೂಗಿದರು. ಜನರು ಸಾಮಾಜಿಕ ಜಾಲತಾಣದಲ್ಲಿ ಬಸ್ಸಮ್ನನ್ನು ಶ್ಲಾಘಿಸಿದ್ದಾರೆ. ಬಸ್ಸಮ್ ವಿರುದ್ಧದ ಆರೋಪಗಳನ್ನು ಬ್ಯಾಂಕ್ ಕೈಬಿಟ್ಟ ನಂತರ ಬಂಧನದಿಂದ ಬಿಡುಗಡೆ ಮಾಡಲಾಗಿದೆ.