
ಪ್ರಧಾನಿ ನರೇಂದ್ರ ಮೋದಿಯವರು ಲತಾ ಮಂಗೇಶ್ಕರ್ರ ಆಶೀರ್ವಾದವನ್ನು ತಮ್ಮ ಅತ್ಯಂತ ದೊಡ್ಡ ಶಕ್ತಿಯ ಮೂಲ ಎಂದು ಬಣ್ಣಿಸಿದ್ದಾರೆ.
ಲತಾ ಸಹೋದರಿಗೆ ಜನ್ಮ ದಿನದ ಶುಭಾಶಯಗಳು. ವಿಶ್ವಾದ್ಯಂತ ಇವರ ಮಧುರವಾದ ಧ್ವನಿಯು ಪ್ರತಿಧ್ವನಿಸುತ್ತದೆ. ಇವರ ವಿನಮ್ರತೆ, ಭಾರತೀಯ ಸಂಸ್ಕೃತಿ ಬಗೆಗಿನ ಉತ್ಸಾಹಕ್ಕಾಗಿ ಗೌರವಿಸಲಾಗುತ್ತದೆ. ಲತಾ ಸಹೋದರಿಯ ದೀರ್ಘ ಆಯುಷ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಮೋದಿ ಟ್ವೀಟಾಯಿಸಿದ್ದಾರೆ.
ನಟಿ ಜುಹಿ ಚಾವ್ಲಾ ಕೂಡ ಟ್ವಿಟರ್ನಲ್ಲಿ ಲತಾ ಮಂಗೇಶ್ಕರ್ ಅವರಿಗೆ ಶುಭ ಕೋರಿದ್ದಾರೆ. ನಿಮ್ಮ ಹಾಡುಗಳನ್ನು ಕೇಳ್ತಿದ್ರೆ ಹೂವಿನ ಮಳೆಯಾದಂತೆ, ಗಂಗಾ ನದಿಯು ಹರಿದಂತೆ ಭಾಸವಾಗುತ್ತದೆ ಎಂದು ಹೇಳಿದ್ದಾರೆ.
ಫಿಲಂ ಮೇಕರ್ ಮಧುರ್ ಭಂಡಾರ್ಕರ್ ಲತಾ ಮಂಗೇಶ್ಕರ್ರನ್ನು ಸಂಗೀತದ ದೇವತೆ ಎಂದು ಬಣ್ಣಿಸಿದ್ದಾರೆ. ಅಲ್ಲದೇ ಜನ್ಮದಿನದ ಶುಭಾಶಯವನ್ನೂ ಕೋರಿದ್ದಾರೆ.