alex Certify BIG NEWS : ಇಂದು ಮಧ್ಯಾಹ್ನ 3.30ಕ್ಕೆ ಹಿರಿಯ ನಟಿ ಲೀಲಾವತಿ ಅಂತ್ಯ ಸಂಸ್ಕಾರ : ಜಿಲ್ಲಾಧಿಕಾರಿ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಇಂದು ಮಧ್ಯಾಹ್ನ 3.30ಕ್ಕೆ ಹಿರಿಯ ನಟಿ ಲೀಲಾವತಿ ಅಂತ್ಯ ಸಂಸ್ಕಾರ : ಜಿಲ್ಲಾಧಿಕಾರಿ ಮಾಹಿತಿ

ಬೆಂಗಳೂರು : ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟಿ ಲೀಲಾವತಿ(85) ನಿಧನರಾಗಿದ್ದು, ಇಡೀ ಚಿತ್ರರಂಗ, ರಾಜ್ಯದ ಜನತೆ ಕಂಬನಿ ಮಿಡಿದಿದೆ.

ಇಂದು ಮಧ್ಯಾಹ್ನ 3.30ಕ್ಕೆ ಹಿರಿಯ ನಟಿ ಲೀಲಾವತಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.ಇಂದು ಬೆಳಗ್ಗೆಯಿಂದ ನೆಲಮಂಗದಲ್ಲಿ ಲೀಲಾವತಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನ 3.30ಕ್ಕೆ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದಿದ್ದಾರೆ. ನೆಲಮಂಗಲದ ಅಂಬೇಡ್ಕರ್ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.

ತೀವ್ರ ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಅವರನ್ನು ನೆಲಮಂಗಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆಗೆ ಅವರು ಮೃತಪಟ್ಟಿದ್ದಾರೆ. ಲೀಲಾವತಿ(1938) ದಕ್ಷಿಣ ಭಾರತದ ನಟಿ. ಕನ್ನಡದಲ್ಲಿ ಪ್ರಧಾನವಾಗಿ ನಟಿಸುವುದರೊಂದಿಗೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳ ಸುಮಾರು 6೦೦ ಚಿತ್ರಗಳಲ್ಲಿ ನಟಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...