alex Certify ನೀರಿನಾಳದಲ್ಲಿ ಪತ್ತೆಯಾದ ಈ ಗಿಡ ಆವರಿಸಿಕೊಂಡಿರೋ ವ್ಯಾಪ್ತಿ ಕೇಳಿದ್ರೆ ಅಚ್ಚರಿಪಡ್ತೀರಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀರಿನಾಳದಲ್ಲಿ ಪತ್ತೆಯಾದ ಈ ಗಿಡ ಆವರಿಸಿಕೊಂಡಿರೋ ವ್ಯಾಪ್ತಿ ಕೇಳಿದ್ರೆ ಅಚ್ಚರಿಪಡ್ತೀರಾ…!

ಫುಟ್ಬಾಲ್ ಆಟದ ಮೈದಾನ ಗಮನಿಸಿದ್ದಿರಾ..? ಆ ಮೈದಾನ ನೋಡ್ತಿದ್ರೆ ಎಂತಹ ವಿಶಾಲ ಮೈದಾನ ಅಂತ ಅನ್ಸುತ್ತೆ ಅಲ್ವಾ…… ಅಂತಹ ಒಂದಲ್ಲ, ಎರಡಲ್ಲ 28 ಸಾವಿರ ಮೈದಾನದಷ್ಟು ವಿಶಾಲವಾಗಿರೊ ಗಿಡವೊಂದು ಆಸ್ಟ್ರೇಲಿಯಾದ ಸಮುದ್ರದಾಳದಲ್ಲಿ ಪತ್ತೆಯಾಗಿದೆ.

ವೆಸ್ಟರ್ನ್ ಆಸ್ಟ್ರೇಲಿಯಾ ಕಂಡು ಬಂದಿರೋ ಈ ವಿಶಾಲಕಾಯದ ಗಿಡ 4500 ವರ್ಷದ ಹಿಂದೆ ಎಕಲ್ ಅನ್ನುವ ವಿಶೇಷ ಜಾತಿಯ ಬೀಜದಿಂದ ಸೃಷ್ಟಿಯಾಗಿರೋ ಗಿಡವಾಗಿದೆ. ಈ ಗಿಡ ಆವರಿಸಿಕೊಂಡಿರೋ ಪ್ರದೇಶವನ್ನ ಶಾರ್ಕಬೇ ಅಂತ ಕರೆಯಲಾಗುತ್ತೆ. ವಿಶ್ವದ ಅದ್ಭುತಗಳಲ್ಲಿ ಇದನ್ನೂ ಒಂದು ಅಂತ ಪರಿಗಣಿಸಲಾಗಿದೆ.
ನಾಲ್ಕು ಸಹಸ್ರಮಾನ ವರ್ಷದ ಹಿಂದೆ ಒಂದೇ ಒಂದು ಬೀಜದಿಂದ ಉದ್ಭವವಾಗಿರೋ ಈ ಗಿಡ, ಹಂತ ಹಂತವಾಗಿ 200 ಚದರ ಕಿಲೋ ಮೀಟರ್ ಆವರಿಸಿಕೊಳ್ಳುತ್ತಾ ಹೋಗಿದೆ. ಮುಂದೆಯೂ ಇದರ ಬೆಳವಣಿಗೆ ಇದೇ ರೀತಿ ನಿರಂತವಾಗಿರುತ್ತೆ.

ಆಸ್ಟ್ರೇಲಿಯಾ ಯುನಿವರ್ಸಿಟಿ ಹಾಗೂ ಫಿಲ್ಡ್ರ್ಸ್ ವಿಶ್ವವಿದ್ಯಾಲಯದ ವಿಶೇಶಜ್ಞರು ಮೊದಲು ಇದನ್ನು ವಿಶೇಷ ಜಾತಿಯ ಹುಲ್ಲು ಎಂದು ಪರಿಗಣಿಸಿದ್ದರು. ಈ ಗಿಡದ ಕುರಿತು ವಿಶೇಷ ಅಧ್ಯಯನ ಮಾಡಿದಾಗಲೇ ಗೊತ್ತಾಗಿದ್ದು ಈ ಗಿಡ ಸಾಮಾನ್ಯವಾಗಿರೋ ಗಿಡವೇ ಅಲ್ಲ ಅಂತ.

ಸಮುದ್ರದ ನೀರಿನಾಳದಲ್ಲಿ ಪತ್ತೆಯಾಗಿರೊ ಈ ಗಿಡದ ಕುರಿತು ಡಾ. ಎಲಿಜಾಬೆತ್ ಸಿಂಕ್ಲೆಯರ್ ಪ್ರಕಾರ, ಸಮುದ್ರದ ನೀರಿನ ಆಳದಲ್ಲಿ ಅನೇಕ ಪ್ರಜಾತಿಯ ಗಿಡಗಳಿವೆ. ಈ ಗಿಡ ಮೈದಾನದಂತೆ ಸಮುದ್ರದ ಆಳದಲ್ಲಿ ಆವರಿಸಿಕೊಂಡಿದೆ. ಇಂತಹ ಅನೇಕ ಪ್ರಕಾರದ ಗಿಡಗಳಿಂದ ಆವೃತವಾಗಿರೋ ಮೈದಾನಗಳಿವೆ. ಅವುಗಳನ್ನ ಪತ್ತೆ ಹಚ್ಚುವುದು ಕಷ್ಟ. ಪ್ರತಿ ಗಿಡಕ್ಕೂ ಅದರದ್ದೇ ಆದ ಡಿಎನ್ಎ ಇರುತ್ತೆ. ಆ ಮೂಲಕ ಗಿಡಗಳನ್ನ ಪತ್ತೆ ಹಚ್ಚುವ ಸಾಹಸ ಮಾಡಬಹುದು ಎಂದು ಹೇಳುತ್ತಾರೆ. ಇದೇ ರೀತಿ ಬೇರೆ ಬೇರೆ ಗಿಡಗಳ ಡಿಎನ್ಎ ಪರೀಕ್ಷೆ ಮಾಡುವಾಗಲೇ ಈ ಮೈದಾನ ಆಕಾರದ ಗಿಡ ಗಮನಕ್ಕೆ ಬಂದಿದ್ದು. ಇದನ್ನ ಸೂಕ್ಷ್ಮವಾಗಿ ಪರೀಕ್ಷೆ ಮಾಡಿದಾಗ ಎಲ್ಲರೂ ಅಚ್ಚರಿ ಪಡುವಂತಹ ಸಂಗತಿ ಬೆಳಕಿಗೆ ಬಂದಿತ್ತು. ಅದೇನೆಂದರೆ ಈ ಗಿಡ ಒಂದೇ ಒಂದು ಬೀಜದಿಂದ ಹುಟ್ಟಿರೋ ಗಿಡವಾಗಿತ್ತು.

ಒಂದೇ ಒಂದು ಬೀಜದ ಗಿಡ 180 ಕಿಲೋಮೀಟರ್ ಆವರಿಸಿರೋದು ಅಂದರೆ ಸಾಮಾನ್ಯದ ಮಾತಲ್ಲ. ಈಗ ಈ ಗಿಡವನ್ನ ವಿಶ್ವದ ವಿಶಾಲ ರೂಪದ ಗಿಡ ಎಂದು ಪರಿಗಣಿಸಲಾಗಿದೆ.

ಪೃಥ್ವಿಯ ಮೇಲೆ ಹೇಗೆ ಭಿನ್ನ ಭಿನ್ನ ಬಣ್ಣ, ಆಕಾರ, ರೂಪದ ಗಿಡಗಳು ಕಾಣಿಸಿಕೊಳ್ಳುತ್ತೊ, ಅದೇ ರೀತಿ ಸಮುದ್ರದಾಳದೊಳಗೂ ಅನೇಕ ಪ್ರಕಾರದ ಗಿಡ, ಮರಗಳು ಇವೆ. ಅದೇ ರೀತಿ ಈ ಗಿಡವೂ ಒಂದಾಗಿದೆ. ಈ ಸಮುದ್ರದ ಹುಲ್ಲನ್ನ ಅತ್ಯಂತ ಹಳೆಯ ಕಾಲದ ಹುಲ್ಲು ಅಂತ ಪರಿಗಣಿಸಲಾಗಿದೆ. ಕಾರಣ ಈ ಗಿಡ 4500 ವರ್ಷ ಹಳೆಯದ್ದು ಅಂತ ಪರೀಕ್ಷೆಯಿಂದ ಹೇಳಲಾಗಿದೆ. ಇದು ಮುಂದೆಯೂ ಪ್ರತಿ ವರ್ಷ 35 ಸೆಂಟಿಮೀಟರ್ ಬೆಳೆಯುತ್ತ ಹೋಗುತ್ತೆ. ಸಮುದ್ರದ ನೀರಿನಾಳದಲ್ಲಿ ಬೆಳೆದಿರುವ ಈ ಹುಲ್ಲು ಪ್ರಜಾತಿಯ ಗಿಡ ಭೂಮಿಯ ಮೇಲೆ ಏರುಪೇರಾಗುತ್ತಿರೋ ವಾತಾವರಣ ಸಮತೋಲನದಲ್ಲಿರುವಂತೆ ಮಾಡುತ್ತೆ ಅಂತ ವಿಜ್ಞಾನಿಗಳು ಹೇಳಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...