ಓಪಾ ಎಂಬ ಬೃಹತ್ತಾದ ಮೀನು ಇತ್ತೀಚೆಗೆ ಅಮೆರಿಕಾದ ಒರೆಗಾನ್‌ನ ಸಮುದ್ರ ತೀರದಲ್ಲಿ ಕಾಣಿಸಿಕೊಂಡಿದ್ದು, ಸ್ಥಳೀಯ ಅಧಿಕಾರಿಗಳ ಪ್ರಕಾರ ಇದೊಂದು ಅಪರೂಪದ ಘಟನೆಯಾಗಿದೆ.
ಮೂನ್ ಫಿಶ್ ಎಂದೂ ಕರೆಯಲ್ಪಡುವ 3.5 ಅಡಿ ಉದ್ದದ ಮೀನು 45 ಕಿಲೋಗ್ರಾಂಗಳಷ್ಟು ತೂಗುತ್ತಿತ್ತು. ಒರೆಗಾನ್‌ನ ವಾಯುವ್ಯ ಭಾಗದಲ್ಲಿರುವ ನಗರದ ಕಡಲತೀರದ ಸನ್ಸೆಟ್ ಬೀಚ್‌ನಲ್ಲಿ ಇದು ಕಂಡುಬಂದಿದೆ.
ತೆರಿಗೆದಾರರಿಗೆ ಗುಡ್‌ನ್ಯೂಸ್: ಇ-ಫೈಲಿಂಗ್ ಫಾರ್ಮ್ ಸಲ್ಲಿಕೆ ಅವಧಿ ವಿಸ್ತರಣೆ
ಮೀನಿನ ಕುರಿತು ಅಧಿಕಾರಿಗಳಿಗೆ ತಿಳಿಯುತ್ತಿದ್ದಂತೆ ಶೀಘ್ರವಾಗಿ ಅದನ್ನು ಪಡೆದುಕೊಂಡರು ಮತ್ತು ಈ ಮೀನು ನೋಡಲು ಪ್ರವಾಸಿಗರಿಗೆ ಅವಕಾಶ ಮಾಡಿಕೊಟ್ಟರು.
ಮೀನಿನ ಕೆಲವು ಚಿತ್ರಗಳನ್ನು ಜಾಲತಾಣದಲ್ಲಿ ಹಂಚಿಕೊಂಡು ಇದನ್ನು ಶೈಕ್ಷಣಿಕ ವರ್ಷ ಪ್ರಾರಂಭವಾಗುವವರೆಗೆ ಕಾಪಾಡಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
https://www.facebook.com/SeasideAquarium/posts/6224256220917665