alex Certify ತೆರಿಗೆದಾರರಿಗೆ ಗುಡ್‌ನ್ಯೂಸ್: ಇ-ಫೈಲಿಂಗ್ ಫಾರ್ಮ್ ಸಲ್ಲಿಕೆ ಅವಧಿ ವಿಸ್ತರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತೆರಿಗೆದಾರರಿಗೆ ಗುಡ್‌ನ್ಯೂಸ್: ಇ-ಫೈಲಿಂಗ್ ಫಾರ್ಮ್ ಸಲ್ಲಿಕೆ ಅವಧಿ ವಿಸ್ತರಣೆ

ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ತೆರಿಗೆದಾರರು ಕೊಂಚ ನಿರಾಳರಾಗುವ ಸುದ್ದಿ ನೀಡಿದೆ. 15 ಸಿಎ ಮತ್ತು 15 ಸಿಬಿ ಫಾರ್ಮ್‌ಗಳ ಎಲೆಕ್ಟ್ರಾನಿಕ್ ಫೈಲಿಂಗ್‌ ಮಾಡಲು ಅವಕಾಶ ವಿಸ್ತರಿಸಿದೆ.

Www.incometax.gov.in ಪೋರ್ಟಲ್‌ನಲ್ಲಿ ಆದಾಯ ತೆರಿಗೆ ಫಾರ್ಮ್‌ಗಳು 15ಸಿಎ/ 15ಸಿಬಿಯನ್ನು ಎಲೆಕ್ಟ್ರಾನಿಕ್ ಫೈಲಿಂಗ್‌ ಮಾಡಲು ತೊಂದರೆ ಗಮನದಲ್ಲಿಟ್ಟುಕೊಂಡು, ಹಸ್ತಚಾಲಿತ ಸ್ವರೂಪದಲ್ಲಿ ಸಲ್ಲಿಸಬಹುದು ಎಂದು ಈ ಹಿಂದೆ ಸಿಬಿಡಿಟಿ ನಿರ್ಧರಿಸಿತು. ಜತೆಗೆ ಜುಲೈ 15ರವರೆಗೆ ಕಾಲಾವಕಾಶ ನೀಡಲಾಗಿತ್ತು. ಈ ಕಾಲಾವಕಾಶವನ್ನು ಆಗಸ್ಟ್ 15ಕ್ಕೆ ವಿಸ್ತರಿಸಲು ನಿರ್ಧರಿಸಲಾಗಿದೆ.

ಚಿನ್ನದ ಮೇಲೆ ಹೂಡಿಕೆ ಮಾಡುವ ಮುನ್ನ ನಿಮಗಿದು ತಿಳಿದಿರಲಿ

ಆದಾಯ ತೆರಿಗೆ ಕಾಯ್ದೆ, 1961 ರ ಪ್ರಕಾರ, ಫಾರ್ಮ್‌ಗಳು 15 ಸಿಎ ಮತ್ತು 15 ಸಿಬಿಯನ್ನು ವಿದ್ಯುನ್ಮಾನವಾಗಿ ಒದಗಿಸುವ ಅವಶ್ಯಕತೆಯಿದೆ. ಆದರೆ ತೆರಿಗೆದಾರರು ಈಗ ಆಗಸ್ಟ್ 15ರವರೆಗೆ ಅಧಿಕೃತ ವಿತರಕರಿಗೆ ಈ ಫಾರ್ಮ್‌ಗಳನ್ನು ಹಸ್ತಚಾಲಿತ ರೂಪದಲ್ಲಿ ಸಲ್ಲಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...