ಪಶ್ಚಿಮ ಬಂಗಾಳದ ಡಾರ್ಜೆಲಿಂಗ್ನಲ್ಲಿ ಶುಕ್ರವಾರ ನಡೆದ ಭೂಕುಸಿತದಲ್ಲಿ ರಾಷ್ಟ್ರೀಯ ಹೆದ್ದಾರಿ 55ರ ಒಂದು ಭಾಗವೇ ಕೊಚ್ಚಿ ಹೋಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಘಟನೆಯಿಂದಾಗಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ವರದಿಯಾಗಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು 40 ಮೀಟರ್ ದೂರದಲ್ಲಿ ಭಾರೀ ಮಳೆ ಉಂಟಾದ ಹಿನ್ನೆಲೆ ತಿಂಡಾರಿಯಾ ಬಳಿಯ ಗೈರಿಗಾಂವ್ ಪ್ರದೇಶವು ಸಂಪೂರ್ಣ ಕೊಚ್ಚಿ ಹೋಗಿದೆ.
ಈ ಭೂಕುಸಿತದಿಂದಾಗಿ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಸಿಲಿಗುರಿ ಹಾಗೂ ಡಾರ್ಜೆಲಿಂಗ್ ನಡುವಿನ ರಸ್ತೆ ಸಂಪರ್ಕವನ್ನ ಕಡಿತಗೊಳಿಸಲಾಗಿತ್ತು. ಹಾಗಂತ ಡಾರ್ಜೆಲಿಂಗ್ಗೆ ರಸ್ತೆ ಮಾರ್ಗ ಸಂಪೂರ್ಣ ಬಂದ್ ಆಗಲಿಲ್ಲ. ರೋಹಿಣಿ ಮಾರ್ಗವಾಗಿ ಡಾರ್ಜೆಲಿಂಗ್ಗೆ ಸಂಚಾರ ಸೌಕರ್ಯದ ವ್ಯವಸ್ಥೆ ಮಾಡಲಾಗಿದೆ.