alex Certify ಬಯಲಾಯ್ತು ಕೊರೋನಾ ಪರಿಸ್ಥಿತಿ ಕೈಮೀರಲು ಕಾರಣವಾದ ರಹಸ್ಯ: ಮೋದಿ ಸರ್ಕಾರದ ವೈಫಲ್ಯವೇ ಕಾರಣವೆಂದ ‘ದಿ ಲ್ಯಾನ್ಸೆಟ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಯಲಾಯ್ತು ಕೊರೋನಾ ಪರಿಸ್ಥಿತಿ ಕೈಮೀರಲು ಕಾರಣವಾದ ರಹಸ್ಯ: ಮೋದಿ ಸರ್ಕಾರದ ವೈಫಲ್ಯವೇ ಕಾರಣವೆಂದ ‘ದಿ ಲ್ಯಾನ್ಸೆಟ್’

ನವದೆಹಲಿ: ದೇಶದಲ್ಲಿ ಕೋರೋನಾ ಪರಿಸ್ಥಿತಿ ಕೈ ಮೀರಿದ್ದು, ಸೋಂಕಿತರು ಮತ್ತು ಸಾವಿನ ಸಂಖ್ಯೆ ಭಾರಿ ಹೆಚ್ಚಾಗುತ್ತಿದೆ. ಇದಕ್ಕೆ ಮೋದಿ ಸರ್ಕಾರದ ನೀತಿಗಳೇ ಕಾರಣ ಎಂದು ‘ದಿ ಲ್ಯಾನ್ಸೆಟ್’ ವರದಿ ಮಾಡಿದೆ.

ದೇಶದಲ್ಲಿ ಕೊರೋನಾ ಎರಡನೆಯ ಅಲೆ ತೀವ್ರತೆ ಪಡೆದುಕೊಳ್ಳಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಳಪೆ ಯೋಜನೆಗಳು ಕಾರಣವೆಂದು ಅಂತರರಾಷ್ಟ್ರೀಯ ವೈದ್ಯಕೀಯ ಜರ್ನಲ್ ‘ದಿ ಲ್ಯಾನ್ಸೆಟ್’ ವರದಿ ಮಾಡಿದೆ.

ಕೊರೋನಾ ಮೊದಲನೇ ಅಲೆ ಹತೋಟಿಗೆ ಬಂದ ನಂತರದಲ್ಲಿ ಎರಡನೇ ಅಲೆ ನಿರ್ವಹಣೆಗೆ ಮೋದಿ ಸರ್ಕಾರ ವಿಫಲವಾದ ಕಾರಣ ದೇಶ ಇಂದು ಸಮಸ್ಯೆಯನ್ನು ತೀವ್ರತರವಾಗಿ ಎದುರಿಸುವಂತಾಗಿದೆ. ಭಾರತದಲ್ಲಿ ಕೋವಿಡ್ ನಿರ್ವಹಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ‘ದಿ ಲ್ಯಾನ್ಸೆಟ್’ ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಇನ್ನಷ್ಟು ಸಂಕಷ್ಟ ಎದುರಾಗಲಿದೆ ಎಂದು ಎಚ್ಚರಿಕೆ ನೀಡಿದೆ.

ಆಗಸ್ಟ್ ವೇಳೆಗೆ ಭಾರತದಲ್ಲಿ ಕೊರೋನಾ ಸೋಂಕಿಗೆ ಮೃತಪಡುವವರ ಸಂಖ್ಯೆ 10 ಲಕ್ಷಕ್ಕೆ ಏರಬಹುದಾಗಿದೆ. ಹಾಗಾದರೆ ಮೋದಿ ಸರ್ಕಾರವೇ ಹೊಣೆ ಎನ್ನಲಾಗಿದೆ. ತಜ್ಞರು ಎಚ್ಚರಿಕೆ ನೀಡಿದರೂ, ಕುಂಭಮೇಳದಂತಹ ಧಾರ್ಮಿಕ ಕಾರ್ಯಕ್ರಮ, ಸಭೆ, ಸಮಾರಂಭ, ಸಂತೆ, 5 ರಾಜ್ಯಗಳ ಚುನಾವಣೆ, ಮೆರವಣಿಗೆ, ರ್ಯಾಲಿಗಳಿಗೆ ಅವಕಾಶ ನೀಡಲಾಗಿದೆ. ಇವುಗಳಿಗೆ ನಿರ್ಬಂಧ ಹೇರಿದ್ದರೆ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ವೈದ್ಯಕೀಯ ಮೂಲಸೌಕರ್ಯದ ಕೊರತೆ ಕಾರಣ ಹೆಚ್ಚಿನವರಿಗೆ ಚಿಕಿತ್ಸೆ ಸೌಲಭ್ಯ ಸಿಗುತ್ತಿಲ್ಲ. ಆಕ್ಸಿಜನ್ ಸಿಲಿಂಡರ್ ಪೂರೈಕೆ ವ್ಯವಸ್ಥೆ ಮಾಡುವಲ್ಲಿಯೂ ಸರ್ಕಾರ ವಿಫಲವಾಗಿದೆ. ವ್ಯಾಕ್ಸಿನೇಷನ್ ತಯಾರಿಕೆ ಹಂಚಿಕೆ-ವಿತರಣೆ ನಿರ್ವಹಣೆಯೂ ಸರಿಯಾಗಿಲ್ಲ ಎಂದು ಕಟುವಾಗಿ ವಿಮರ್ಶಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...