alex Certify ಅಶ್ಲೀಲ ಚಿತ್ರ ತೋರಿಸಿ ಅತ್ಯಾಚಾರವೆಸಗಿದ ತಂದೆ..! ಬೆಚ್ಚಿಬೀಳಿಸುವಂತಿದೆ ಬಾಲಕಿಯ ಕರುಣಾಜನಕ ಕಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಶ್ಲೀಲ ಚಿತ್ರ ತೋರಿಸಿ ಅತ್ಯಾಚಾರವೆಸಗಿದ ತಂದೆ..! ಬೆಚ್ಚಿಬೀಳಿಸುವಂತಿದೆ ಬಾಲಕಿಯ ಕರುಣಾಜನಕ ಕಥೆ

ಮಕ್ಕಳನ್ನು ರಕ್ಷಿಸುವ ಜವಾಬ್ದಾರಿ ತಂದೆ ಮೇಲಿರುತ್ತದೆ. ಆದ್ರೆ ಉತ್ತರ ಪ್ರದೇಶದ ಲಲಿತಪುರದಲ್ಲಿ ತಂದೆಯೊಬ್ಬ ರಾಕ್ಷಸನಾಗಿದ್ದಾನೆ. 17 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಷ್ಟೇ ಅಲ್ಲ ಬಾಲಕಿ ಮೇಲೆ 28 ಮಂದಿ ಅತ್ಯಾಚಾರವೆಸಗಿದ್ದಾರೆ. ಬಾಲಕ ಭಯಾನಕ ಸತ್ಯವನ್ನು ಎಲ್ಲರ ಮುಂದಿಟ್ಟಿದ್ದಾಳೆ.

ಸಿನಿಮೀಯ ರೀತಿಯಲ್ಲಿ ಬರೋಬ್ಬರಿ 72 ಲಕ್ಷ ರೂಪಾಯಿ ವಂಚನೆ

ಕಳೆದ ಹಲವು ವರ್ಷಗಳಿಂದ ತಂದೆ ಸೇರಿದಂತೆ 28 ಮಂದಿ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಬಾಲಕಿ ಹೇಳಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ.

ಒಂದೊಳ್ಳೆ ಉದ್ದೇಶಕ್ಕೆ ಗ್ರಾಮಿ ಪ್ರಶಸ್ತಿ ವಿಜೇತೆಯ ವಸ್ತುಗಳು ಹರಾಜಿಗೆ…!

ಬಾಲಕಿ 6ನೇ ತರಗತಿಯಲ್ಲಿರುವ ವೇಳೆ ಅಶ್ಲೀಲ ವಿಡಿಯೋ ತೋರಿಸಿದ ತಂದೆ, ಸಂಬಂಧ ಬೆಳೆಸುವಂತೆ ಒತ್ತಡ ಹೇರಿದ್ದನಂತೆ. ಆದ್ರೆ ಪೀಡಿತೆ ನಿರಾಕರಿಸಿದ್ದಳಂತೆ. ಇದಾದ್ಮೇಲೆ ಹೊಸ ಬಟ್ಟೆ, ಬೈಕ್ ಕಲಿಸುವ ಆಮಿಷ ತೋರಿಸಿದ್ದನಂತೆ. ಬೈಕ್ ಕಲಿಸುವ ನೆಪದಲ್ಲಿ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದ ತಂದೆ, ಮಗಳ ಮೇಲೆ ಅತ್ಯಾಚಾರವೆಸಗಿದ್ದನಂತೆ. ಸತ್ಯ ಹೊರ ಹಾಕಿದ್ರೆ ತಾಯಿ ಹತ್ಯೆ ಮಾಡುವುದಾಗಿ ಬೆದರಿಸಿದ್ದನಂತೆ.

ಪತ್ನಿ ಇಷ್ಟದಂತೆ ಮನೆ ನಿರ್ಮಿಸಿದ 72 ವರ್ಷದ ಪತಿ

ನಂತ್ರ ಹೊಟೇಲ್ ಗೆ ಕರೆದೊಯ್ದು ಮಾದಕ ವಸ್ತು ನೀಡ್ತಿದ್ದ ತಂದೆ, ಪ್ರತಿ ದಿನ ಒಬ್ಬೊಬ್ಬರನ್ನು ಕಳುಹಿಸುತ್ತಿದ್ದನಂತೆ. ಇದ್ರಿಂದ ತಪ್ಪಿಸಿಕೊಳ್ಳಲು ಅಜ್ಜಿ ಮನೆಗೆ ಹೋದ್ರೆ ಮಾವಂದಿರು ಆಕೆ ಮೇಲೆ ಅತ್ಯಾಚಾರವೆಸಗಿದ್ದರಂತೆ. ಅದನ್ನು ಬಾಯ್ಬಿಡದಂತೆ ಅಜ್ಜಿ ಹೇಳಿದ್ದಳಂತೆ.

ಸಮಾಜವಾದಿ ಪಕ್ಷದ ಜಿಲ್ಲಾ ಅಧ್ಯಕ್ಷ ತಿಲಕ್ ಯಾದವ್, ಎಸ್ಪಿ ನಗರ ಅಧ್ಯಕ್ಷ ರಾಜೇಶ್ ಜೈನ್ ಜೋಜಿಯಾ, ಬಹುಜನ ಸಮಾಜ ಪಕ್ಷದ ಜಿಲ್ಲಾ ಅಧ್ಯಕ್ಷ ದೀಪಕ್ ಅಹಿರ್ವಾರ್ ಹೆಸರು ಇದ್ರಲ್ಲಿ ಕೇಳಿ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...