alex Certify ʼನನ್ನ ಎಸ್‌ಎಂಎಸ್‌ ಗೆ ರಿಪ್ಲೇ ಮಾಡಿʼ; ಲಲಿತ್ ಮೋದಿ ಹಳೆ ಟ್ವೀಟನ್ನು ಕಿಂಡಲ್ ಮಾಡಿದ ಟ್ವೀಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼನನ್ನ ಎಸ್‌ಎಂಎಸ್‌ ಗೆ ರಿಪ್ಲೇ ಮಾಡಿʼ; ಲಲಿತ್ ಮೋದಿ ಹಳೆ ಟ್ವೀಟನ್ನು ಕಿಂಡಲ್ ಮಾಡಿದ ಟ್ವೀಟಿಗರು

ಉದ್ಯಮಿ ಹಾಗೂ ಐಪಿಎಲ್ ಹೊಸ ರೂಪ ಕೊಟ್ಟು ಹೆಸರು ಮಾಡಿದ್ದ ಲಲಿತ್​ ಮೋದಿಯವರು ಸುಶ್ಮಿತಾ ಸೇನ್​ ಅವರೊಂದಿಗೆ ಡೇಟಿಂಗ್​ ಮಾಡುವುದಾಗಿ ಘೋಷಿಸಿದ ಕೆಲವೇ ಕ್ಷಣಗಳಲ್ಲಿ, ಅವರ ಹಳೆಯ ಟ್ವೀಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಲು ಪ್ರಾರಂಭವಾಯಿತು.

“ಸುಶ್ಮಿತಾ ಸೇನ್​ ನನ್ನ ಎಸ್​ಎಂಎಸ್​ಗೆ ಉತ್ತರಿಸಿ’ ಎಂದು ಲಲಿತ್​ ಮೋದಿ ಮಾಡಿದ್ದ ಟ್ವೀಟ್​ ಈಗ ಸದ್ದು ಮಾಡುತ್ತಿದೆ. ಆ ಟ್ವೀಟ್​ ಮಾಡಿದ್ದು 2013ರಲ್ಲಿ. ಆದರೆ, ಈಗ ಹಾಸ್ಯಮಯ ಪ್ರತಿಕ್ರಿಯೆಗಳಿಗೆ ಆ ಒಂದು ಸಣ್ಣ ಪೋಸ್ಟ್​ ಕಾರಣವಾಗಿದೆ.

ಜುಲೈ 14ರಂದು ಸಾಮಾಜಿಕ ಮಾಧ್ಯಮ ಪೋಸ್ಟ್​ಗಳಲ್ಲಿ ಲಲಿತ್​ ಮೋದಿ ಅವರು ತಮ್ಮ “ಬೆಟರ್​ ಹಾಫ್’ ಸುಶ್ಮಿತಾ ಸೇನ್​ ಅವರೊಂದಿಗಿನ ಸಂಬಂಧವನ್ನು ಅಧಿಕೃತಗೊಳಿಸಿದರು. ಅವರ ರಜೆಯ ಮೂಡ್​ನ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.

ಲಲಿತ್​ ಮೋದಿ ಅವರು 2013ರಲ್ಲಿ ಸುಶ್ಮಿತಾಗೆ ಪೋಸ್ಟ್​ ಮಾಡಿದ ನಿರ್ದಿಷ್ಟ ಟ್ವೀಟ್​ ಹಿಂದಿನ ಕಥೆಯೂ ಸ್ವಾರಸ್ಯಕರ. ಈಗ ಟ್ರೆಂಡಿಂಗ್​ ಆಗಿರುವ ಲಲಿತ್​ ಮೋದಿಯ “ನನ್ನ ಎಸ್​ಎಂಎಸ್ ಗೆ​ ಉತ್ತರಿಸಿ’ ಎಂಬ ಟ್ವೀಟ್​ ಮೀಮ್​ಗಳು ಮತ್ತು ಜೋಕ್​ಗಳಿಗಾಗಿ ಬಳಕೆಯಾಗಿದೆ.

BIG NEWS: ಎರಡು ಬೈಕ್ ಗಳ ನಡುವೆ ಭೀಕರ ಅಪಘಾತ; ಮೂವರು ಸ್ಥಳದಲ್ಲೇ ದುರ್ಮರಣ

ಲಲಿತ್​ ಮೋದಿ ತೆರಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆಯ ತನಿಖೆಯ ನಡುವೆ 2010ರಲ್ಲಿ ಭಾರತವನ್ನು ತೊರೆದು ಲಂಡನ್​ನಲ್ಲಿದ್ದಾರೆ.

1994ರ ವಿಶ್ವ ಸುಂದರಿ ಸ್ಪರ್ಧೆಯ ವಿಜೇತೆ ಸುಶ್ಮಿತಾ ಸೇನ್​ 1996 ರ ದಸ್ತಕ್​ ಚಿತ್ರದ ಮೂಲಕ ಬಾಲಿವುಡ್​ಗೆ ಪಾದಾರ್ಪಣೆ ಮಾಡಿದ್ದರು. ಅನೇಕ ಸೂಪರ್​ ಹಿಟ್​ ಚಿತ್ರದಲ್ಲಿ ಅವರು ನಾಯಕಿಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...