alex Certify ಕುರ್ತಾ – ಪೈಜಾಮಾ ಹಾಕಿದ್ದೇ ತಪ್ಪಾಯ್ತಾ..? ಕೆಲಸ ಕಳೆದುಕೊಂಡ ಶಿಕ್ಷಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುರ್ತಾ – ಪೈಜಾಮಾ ಹಾಕಿದ್ದೇ ತಪ್ಪಾಯ್ತಾ..? ಕೆಲಸ ಕಳೆದುಕೊಂಡ ಶಿಕ್ಷಕ

ಬಟ್ಟೆಗಳು ಮನುಷ್ಯನ ವ್ಯಕ್ತಿತ್ವವನ್ನ ಪ್ರತಿಬಿಂಬಿಸುತ್ತೆ ಅನ್ನೋ ಮಾತಿದೆ. ಆದರೆ ಅದೇ ಧರಿಸಿರೋ ಬಟ್ಟೆ ಮನುಷ್ಯನ ಕೆಲಸವನ್ನ ಕಿತ್ತುಕೊಳ್ಳುತ್ತೆ ಅಂದ್ರೆ ನಂಬ್ತಿರಾ ? ಈಗ ಇದೇ ಘಟನೆ ಬಿಹಾರದ ಲಖಿಸರಾಯ್ ಜಿಲ್ಲೆಯ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಶಾಲೆಯಲ್ಲಿ ಕುರ್ತಾ ಪೈಜಾಮಾ ಧರಿಸಿದ್ದಕ್ಕೆ ಶಾಲೆಯ ಮುಖ್ಯೋಪಾಧ್ಯಾಯನಿಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ತರಾಟೆಗೆ ತೆಗೆದುಕೊಂಡ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.

ಡಿಎಂ ಮುಖ್ಯೋಪಾಧ್ಯಾಯನಿಗೆ ನಿಂದಿಸುತ್ತಿರುವ, ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದೀಗ ಶಿಕ್ಷಕರು ಉಡುಗೆ ಕುರ್ತಾ, ಪೈಜಾಮಾ ಧರಿಸುವುದು ಅಪರಾಧವೇ ಎಂಬ ಪ್ರಶ್ನೆಯನ್ನು ನೆಟ್ಟಿಗರು ಕೇಳುತ್ತಿದ್ದಾರೆ.

ಬಿಹಾರದ ಲಖಿಸರಾಯ್ ಜಿಲ್ಲೆಯ ಡಿಎಂ ಸಂಜಯ್ ಕುಮಾರ್ ಸಿಂಗ್ ಅವರು, ಬಾಲಕಿಯರ ಪ್ರಾಥಮಿಕ ಶಾಲೆಯ ಬಾಲ್ಗುಡಾರ್ ಅವರನ್ನು ಕುರ್ತಾ, ಪೈಜಾಮ ಧರಿಸಿದ್ದಕ್ಕಾಗಿ ಗದರಿಸಿದ್ದಾರೆ. ನೀನು ಶಿಕ್ಷಕನೇ ಅಲ್ಲ, ರಾಜಕಾರಣಿಯಂತೆ ಕಾಣಿಸುತ್ತಿದ್ದೀಯ ಎಂದು ನಿಂದಿಸಿದ್ದಾರೆ.

ಸರ್ಕಾರದ ಆದೇಶದ ಮೇರೆಗೆ ಡಿಎಂ ಸಂಜಯ್‌ಕುಮಾರ್‌ ಶಾಲೆಗೆ ತಪಾಸಣೆಗೆ ಬಂದಿದ್ದಾಗ ಮುಖ್ಯೋಪಾಧ್ಯಾಯರ ಉಡುಗೆ ಕಂಡು ಛೀಮಾರಿ ಹಾಕಿದ್ದಾರೆ. ಬಳಿಕ ಸ್ಥಳದಲ್ಲೇ ಅವರು ಶಿಕ್ಷಣಾಧಿಕಾರಿಗಳಿಗೆ ಕರೆ ಮಾಡಿ ಮುಖ್ಯೋಪಾಧ್ಯಾಯರನ್ನು ಅಮಾನತುಗೊಳಿಸುವಂತೆ ಕೇಳಿದ್ದಾರೆ, ಹಾಗೂ ವೇತನ ಕಡಿತಗೊಳಿಸಿ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ.

— Saurabh Pathak (@SaurabhPathakJi) July 10, 2022

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...