
ಶಾಲೆಯಲ್ಲಿ ಕುರ್ತಾ ಪೈಜಾಮಾ ಧರಿಸಿದ್ದಕ್ಕೆ ಶಾಲೆಯ ಮುಖ್ಯೋಪಾಧ್ಯಾಯನಿಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ತರಾಟೆಗೆ ತೆಗೆದುಕೊಂಡ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ.
ಡಿಎಂ ಮುಖ್ಯೋಪಾಧ್ಯಾಯನಿಗೆ ನಿಂದಿಸುತ್ತಿರುವ, ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದೀಗ ಶಿಕ್ಷಕರು ಉಡುಗೆ ಕುರ್ತಾ, ಪೈಜಾಮಾ ಧರಿಸುವುದು ಅಪರಾಧವೇ ಎಂಬ ಪ್ರಶ್ನೆಯನ್ನು ನೆಟ್ಟಿಗರು ಕೇಳುತ್ತಿದ್ದಾರೆ.
ಬಿಹಾರದ ಲಖಿಸರಾಯ್ ಜಿಲ್ಲೆಯ ಡಿಎಂ ಸಂಜಯ್ ಕುಮಾರ್ ಸಿಂಗ್ ಅವರು, ಬಾಲಕಿಯರ ಪ್ರಾಥಮಿಕ ಶಾಲೆಯ ಬಾಲ್ಗುಡಾರ್ ಅವರನ್ನು ಕುರ್ತಾ, ಪೈಜಾಮ ಧರಿಸಿದ್ದಕ್ಕಾಗಿ ಗದರಿಸಿದ್ದಾರೆ. ನೀನು ಶಿಕ್ಷಕನೇ ಅಲ್ಲ, ರಾಜಕಾರಣಿಯಂತೆ ಕಾಣಿಸುತ್ತಿದ್ದೀಯ ಎಂದು ನಿಂದಿಸಿದ್ದಾರೆ.
ಸರ್ಕಾರದ ಆದೇಶದ ಮೇರೆಗೆ ಡಿಎಂ ಸಂಜಯ್‌ಕುಮಾರ್ ಶಾಲೆಗೆ ತಪಾಸಣೆಗೆ ಬಂದಿದ್ದಾಗ ಮುಖ್ಯೋಪಾಧ್ಯಾಯರ ಉಡುಗೆ ಕಂಡು ಛೀಮಾರಿ ಹಾಕಿದ್ದಾರೆ. ಬಳಿಕ ಸ್ಥಳದಲ್ಲೇ ಅವರು ಶಿಕ್ಷಣಾಧಿಕಾರಿಗಳಿಗೆ ಕರೆ ಮಾಡಿ ಮುಖ್ಯೋಪಾಧ್ಯಾಯರನ್ನು ಅಮಾನತುಗೊಳಿಸುವಂತೆ ಕೇಳಿದ್ದಾರೆ, ಹಾಗೂ ವೇತನ ಕಡಿತಗೊಳಿಸಿ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ.