ಇತ್ತೀಚಿನ ದಿನಗಳಲ್ಲಿ ಹವಾಮಾನ ಹೇಗೆಲ್ಲಾ ಇರಬಹುದು ಎಂದು ನಿಖರವಾಗಿ ಅಳೆಯುವುದು ಅಸಾಧ್ಯವೆಂದೇ ಹೇಳಬಹುದು. ನ್ಯೂಯಾರ್ಕ್‌ನ ಹ್ಯಾಂಬರ್ಗ್‌ನಲ್ಲಿರುವ ಸರೋವರದ ಬಳಿ ಪಾರ್ಕ್ ಮಾಡಲಾಗಿದ್ದ ಕಾರುಗಳು ಹಿಮದ ದಪ್ಪ ಹೊದಿಕೆಯಲ್ಲಿ ಮುಚ್ಚಿಹೋಗಿದ್ದವು. ಈ ಕಾರುಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಎಸ್‌ಯುವಿಯೊಂದು ತನ್ನ ಸುತ್ತಲೂ ಹಿಮದಿಂದ ಮುಚ್ಚಿಹೋಗಿರುವ ಹಿಮದಿಂದಾಗಿ ಬೇರೆಯದ್ಧೇ ವಸ್ತುವಿನ ಹಾಗೆ ಗೋಚರಿಸುತ್ತಿರುವುದನ್ನು ಟ್ವಿಟರ್‌ನಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ಕ್ಯಾಮೆರಾವನ್ನು ಮತ್ತೊಂದು ಬದಿಗೆ ಪ್ಯಾನ್ ಮಾಡಿದ ಬಳಿಕ ಹಿಮಾವೃತವಾಗಿರುವ ಎಸ್‌ಯುವಿ ಸುತ್ತಲೂ ನೀರು ಭೋರ್ಗರೆದು ಬರುತ್ತಿರುವುದನ್ನು ನೋಡಬಹುದಾಗಿದೆ.
ನ್ಯೂಯಾರ್ಕ್ ಪೋಸ್ಟ್ ವರದಿ ಪ್ರಕಾರ, ಆ ಕಾರಿನ ಚಾಲಕ ಸರೋವರದ ಬದಿಯಲ್ಲಿ ಪಾರ್ಕ್ ಮಾಡಿ, ಕೆಲ ಹೊತ್ತಿನ ಬಳಿಕ ಬಂದು ನೋಡಿದಾಗ ಕೆರೆಯಿಂದ ಚಿಮ್ಮುತ್ತಿದ್ದ ನೀರಿನಿಂದ ಆ ಕಾರು ಹೀಗೆ ಆಗಿರುವುದನ್ನು ಕಂಡಿದ್ದಾನೆ.
ನ್ಯೂಯಾರ್ಕ್‌ನ ತಾಪಮಾನದಲ್ಲಿ ಭಾರೀ ಇಳಿಕೆಯಾಗಿದ್ದಲ್ಲದೇ, ಗಂಟೆಗೆ 47 ಮೈಲಿ ವೇಗದಲ್ಲಿ ಬೀಸಿದ ಜೋರಾದ ಗಾಳಿಯಿಂದಾಗಿ ಹೀಗೆ ಸರೋವರದಿಂದ ಭಾರೀ ಪ್ರಮಾಣದಲ್ಲಿ ನೀರು ಕಾರಿನ ಮೇಲೆ ಚಿಮ್ಮಿದ್ದು, ಅದು ಶೀತಮಯ ವಾತಾವರಣದಿಂದ ಹೀಗೆ ಹೆಪ್ಪುಗಟ್ಟಿದೆ.
https://twitter.com/blabla112345/status/1637779365982265347?ref_src=twsrc%5Etfw%7Ctwcamp%5Etweetembed%7Ctwterm%5E1637779365982265347%7Ctwgr%5Ee83944b4cdf4f47ba3ab3cabb2dd1556b1120d00%7Ctwcon%5Es1_&ref_url=https%3A%2F%2Fwww.news18.com%2Fbuzz%2Flake-water-carried-by-wind-freezes-on-suv-in-new-york-video-leaves-internet-perplexed-7363699.html