alex Certify ಕೋವಿಡ್​ -19 ಮಹಾಮಾರಿಗೆ ಕರ್ತವ್ಯನಿರತ ಗರ್ಭಿಣಿ PSI ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ -19 ಮಹಾಮಾರಿಗೆ ಕರ್ತವ್ಯನಿರತ ಗರ್ಭಿಣಿ PSI ಬಲಿ

ಕೊರೊನಾ ಮಾಹಾಮಾರಿಯ ಆರ್ಭಟ ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ದಕ್ಷಿಣ ಕನ್ನಡದಲ್ಲೂ ಕರ್ತವ್ಯನಿರತ ಮಹಿಳಾ ಪಿಎಸ್​ಐ ಮಾರಕ ಕಾಯಿಲೆಗೆ ಬಲಿಯಾಗಿದ್ದಾರೆ. ಕೋಲಾರ ಮೂಲದವರಾದ 24 ವರ್ಷದ ಶಾಮಿಲಿ ಕೊರೊನಾಗೆ ಬಲಿಯಾದ ಪ್ರೊಬೆಷನರಿ ಪಿಎಸ್​ಐ ಆಗಿದ್ದಾರೆ.

ಶಾಮಿಲಿ ಏಳು ತಿಂಗಳ ಗರ್ಭಿಣಿಯಾಗಿದ್ದರಿಂದ ಕೊರೊನಾ ಲಸಿಕೆಯನ್ನ ಪಡೆದಿರಲಿಲ್ಲ. ಏಪ್ರಿಲ್​ 20ರಂದು ಕರ್ತವ್ಯದಿಂದ ರಜೆ ಪಡೆದು ಕೋಲಾರಕ್ಕೆ ತೆರಳಿದ್ದರು. ಮೇ.2ರಂದು ಕೊರೊನಾ ಪಾಸಿಟಿವ್​ ಬಂದ ಹಿನ್ನೆಲೆ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಜನವರಿ 12ರಂದು ಪ್ರೊಬೆಷನರಿ ಪಿಎಸ್​ಐ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದ ಶ್ಯಾಮಿಲಿ ಮಂಗಳೂರಿನ ಎಸ್ಪಿ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...