alex Certify ಈ ಹೆಗ್ಗಳಿಕೆಗೆ ಪಾತ್ರವಾಗಿದೆ ಲೇಹ್‌ ನಲ್ಲಿ ತಲೆಯೆತ್ತಿದ ಥಿಯೇಟರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಹೆಗ್ಗಳಿಕೆಗೆ ಪಾತ್ರವಾಗಿದೆ ಲೇಹ್‌ ನಲ್ಲಿ ತಲೆಯೆತ್ತಿದ ಥಿಯೇಟರ್‌

ಲಡಾಖ್‌ನ ಲೇಹ್‌ ನಲ್ಲಿ ಸಮುದ್ರ ಮಟ್ಟದಿಂದ 11,562 ಅಡಿ ಎತ್ತರದಲ್ಲಿ ನಿರ್ಮಿಸಲಾದ ಡಿಜಿಟಲ್ ಮೂವಿ ಥಿಯೇಟರ್‌, ಜಗತ್ತಿನ ಅತ್ಯಂತ ಎತ್ತರದ ಪ್ರದೇಶದಲ್ಲಿರುವ ಥಿಯೇಟರ್‌ ಎಂಬ ಶ್ರೇಯಕ್ಕೆ ಪಾತ್ರವಾಗಿದೆ.

ಪಿಕ್ಚರ್‌ ಟೈಮ್ ಡಿಜಿಪ್ಲೆಕ್ಸ್‌‌ ಸಂಸ್ಥೆಯು ಈ ಥಿಯೇಟರ್‌‌ ಅಳವಡಿಸಿದ್ದು, ದೂರದ ಪ್ರದೇಶಗಳಲ್ಲಿರುವ ಮಂದಿಗೂ ಸಿನೆಮಾ ನೋಡುವ ಮಜಾನುಭವ ಕೊಡಲು ಮುಂದಾಗಿದೆ. ಈ ಥಿಯೇಟರ್‌ -28 ಡಿಗ್ರಿಯಷ್ಟು ಚಳಿಯಲ್ಲೂ ಕೆಲಸ ಮಾಡಬಲ್ಲದಾಗಿದೆ.

ಕೋವಿಡ್​ ನಡುವೆಯೂ ಪ್ರೇಕ್ಷಕರಿಂದ ತುಂಬಿದ ಚಿತ್ರಮಂದಿರ: ನಿಟ್ಟುಸಿರು ಬಿಟ್ಟ ಬಂಗಾಳಿ ಚಿತ್ರರಂಗ

ಗಾಳಿಯಿಂದ ಉಬ್ಬಿಸಬಹುದಾದ ವಸ್ತುಗಳಿಂದ ನಿರ್ಮಿಸಲಾಗಿರುವ ಈ ಥಿಯೇಟರ್‌ ಅನ್ನು ಲೇಹ್‌ ನ ಎನ್‌ಎಸ್‌ಡಿ ಕ್ರೀಡಾಂಗಣದಲ್ಲಿ ಮೊದಲು ನಿರ್ಮಾಣ ಮಾಡಲಾಗಿದೆ. ಈ ವೇಳೆ ಲಡಾಖ್ ಬೌದ್ಧ ಸಂಘದ ಅಧ್ಯಕ್ಷ ತುಪ್ಸಾ ನ್ ಚೆವಾಂಗ್‌ ಹಾಗೂ ನಟ ಪಂಕಜ್ ತ್ರಿಪಾಠಿ ಉಪಸ್ಥಿತರಿದ್ದರು. ಮುಂದಿನ ದಿನಗಳಲ್ಲಿ ಲೇಹ್‌ ನಗರದಲ್ಲಿ ನಾಲ್ಕು ಮೊಬೈಲ್ ಥಿಯೇಟರ್‌ಗಳನ್ನು ಅಳವಡಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...