alex Certify ಕೋವಿಡ್​ ನಡುವೆಯೂ ಪ್ರೇಕ್ಷಕರಿಂದ ತುಂಬಿದ ಚಿತ್ರಮಂದಿರ: ನಿಟ್ಟುಸಿರು ಬಿಟ್ಟ ಬಂಗಾಳಿ ಚಿತ್ರರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ ನಡುವೆಯೂ ಪ್ರೇಕ್ಷಕರಿಂದ ತುಂಬಿದ ಚಿತ್ರಮಂದಿರ: ನಿಟ್ಟುಸಿರು ಬಿಟ್ಟ ಬಂಗಾಳಿ ಚಿತ್ರರಂಗ

ಸೆಕೆಂಡ್​ ಲಾಕ್​ಡೌನ್​​ ಮುಗಿದ ಬಳಿಕ ಚಿತ್ರಮಂದಿರಗಳು ಭಾಗಶಃ ತೆರೆದಿವೆ. ಆದರೆ ಸಿನಿಮಾಗಳನ್ನು ರಿಲೀಸ್​ ಮಾಡಿದರೆ ಜನರು ಸಿನಿಮಾ ವೀಕ್ಷಿಸಲು ಥಿಯೇಟರ್​ನತ್ತ ಧಾವಿಸುತ್ತಾರೋ ಇಲ್ಲವೋ ಎಂಬ ಭಯ ನಿರ್ಮಾಪಕರಲ್ಲಿದೆ. ಹೀಗಾಗಿ ಅನೇಕರು ಸಿನಿಮಾಗಳು ಸಂಪೂರ್ಣ ತಯಾರಾಗಿದ್ದರೂ ಸಹ ರಿಲೀಸ್​ ಮಾಡಲು ಹಿಂದೇಟು ಹಾಕುತ್ತಿದ್ದಾರೆ.

ಆದರೆ ಈ ಎಲ್ಲಾ ಭಯಗಳಿಗೆ ಮುಲಾಮು ಎಂಬಂತೆ ಥಿಯೇಟರ್​ನಲ್ಲಿ ತೆರೆ ಕಂಡ ಬಂಗಾಳಿಯ ಎರಡು ಸಿನಿಮಾಗಳು ಕೆಲ ಸಿನಿಮಾ ಹಾಲ್​ಗಳಲ್ಲಿ ಹೌಸ್​ ಫುಲ್​ ಪ್ರದರ್ಶನ ಕಾಣುತ್ತಿದೆ. ಅಟಾನು ಘೋಷ್​​ರ ಬಿನಿಸುತೋಯ್​ ಹಾಗೂ ಬಿರ್ಸಾ ದಾಸ್​ಗುಪ್ತಾರ ಮುಖೋಶ್​​​ರ ಹೌಸ್​ ಫುಲ್​ ಪ್ರದರ್ಶನ ಕಾಣುತ್ತಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಅಟಾನು, ಜನರು ಥಿಯೇಟರ್​ನತ್ತ ಮುಖ ಮಾಡಿರೋದನ್ನು ಕಂಡು ತುಂಬಾನೇ ಸಂತೋಷವಾಗುತ್ತಿದೆ. ಸಿನಿಮಾಗಳನ್ನು ವೀಕ್ಷಿಸಲು ಸಾಕಷ್ಟು ಬೇರೆ ವೇದಿಕೆಗಳು ಇದ್ದರೂ ಸಹ ಥಿಯೇಟರ್​ನಲ್ಲಿ ಸಿಕ್ಕ ಮಜಾ ಬೇರೆಡೆ ಸಿಗಲು ಸಾಧ್ಯವೇ ಇಲ್ಲ. ಹೀಗಾಗಿ ಜನರು ಥಿಯೇಟರ್​ನತ್ತ ಬರ್ತಿದ್ದಾರೆ, ಇದರಿಂದ ನನಗೆ ಸಂತೋಷವಾಗಿದೆ ಎಂದು ಹೇಳಿದ್ರು.

ಬಿರ್ಸಾ ಕೂಡ ಇದೇ ವಿಚಾರವಾಗಿ ಮಾತನಾಡಿದ್ದು, ಕಳೆದ ಒಂದೂವರೆ ವರ್ಷದ ಅವಧಿಯು ನನ್ನಂತ ಅನೇಕರ ಪಾಲಿಗೆ ಕಷ್ಟದ ಸಮಯವಾಗಿದೆ. ನಾವೆಲ್ಲ ಥಿಯೇಟರ್ ಪುನಾರಂಭವಾಗೋದನ್ನೇ ಕಾಯುತ್ತಿದ್ದೆವು. ಪಶ್ಚಿಮ ಬಂಗಾಳದಲ್ಲಿ ಚಿತ್ರಮಂದಿರಗಳು ಪುನಾರಂಭಗೊಂಡಿದೆ.

ಅದೃಷ್ಟವಶಾತ್​ ಪ್ರೇಕ್ಷಕರು ಕೂಡ ಚಿತ್ರಮಂದಿರಗಳತ್ತ ಬರ್ತಿದ್ದಾರೆ. ಮೊದಲ ವಾರದಲ್ಲಿ ಪ್ರೇಕ್ಷಕರ ಸಂಖ್ಯೆ ತೃಪ್ತಿದಾಯಕವಾಗಿತ್ತು. ಆದರೆ 2ನೇ ವಾರಾಂತ್ಯದಲ್ಲಿ ಈ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಜನರು ಚಿತ್ರಮಂದಿರಗಳಲ್ಲಿ ಸಿನಿಮಾಗಳನ್ನು ಅದರಲ್ಲೂ ವಿಶೇಷವಾಗಿ ಬಂಗಾಳಿ ಸಿನಿಮಾಗಳನ್ನು ನೋಡಲು ಉತ್ಸುಕರಾಗಿದ್ದಾರೆ. ಇಲ್ಲಿಂದ ಮುಂದಿನ ದಿನಗಳು ಶುಭಕರವಾಗಿರಲಿ ಎಂದು ಆಶಿಸುವೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...